ಹಾಸನ : ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಫೈನಲ್ ಮಾಡಿ ಕಣಕ್ಕಿಳಿಸುವ ತರಾತುರಿಯಲ್ಲಿವೆ. ಈ ನಡುವೆ ಒಂದಿಷ್ಟು ಕ್ಷೇತ್ರಗಳ ರಣಕಣದ ಅಭ್ಯರ್ಥಿಗಳ ಹೆಸರು ಪಕ್ಕಾ ಆಗಿದೆ. ಆದರೆ, ಹಾಸನ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಒಂದು ಅಚ್ಚರಿಯ ನಡೆ ಕೇಳಿಬಂದಿದೆ.
ತಮ್ಮ ಫೇವರೇಟ್ ಕ್ಷೇತ್ರವಾದ ಹಾಸನವನ್ನು ಮೊಮ್ಮಗ ಪ್ರಜ್ವಲ್ ರೇವಣ್ಣ ಅವರಿಗೆ ಬಿಟ್ಟು ಕೊಟ್ಟು ತುಮಕೂರು ಅಥವಾ ಬೆಂಗಳೂರು ಉತ್ತರದಿಂದ ಸ್ಪರ್ಧಿಸೋ ಯೋಚನೆಯಲ್ಲಿದ್ದ ಮಾಜಿ ಪ್ರಧಾನಿ ದೇವೇಗೌಡರು ಹಾಸನದಿಂದಲೇ ಸ್ಪರ್ಧಿಸ್ತಾರೆ ಎನ್ನಲಾಗುತ್ತಿದೆ.
ಸತತ 5 ಬಾರಿ ಹಾಸನದಿಂದ ಸಂಸತ್ತಿಗೆ ಆಯ್ಕೆಯಾಗಿದ್ದ ಹೆಚ್. ಡಿ ದೇವೇಗೌಡರು, ಇತ್ತೀಚೆಗಷ್ಟೇ ತಮ್ಮ ಕ್ಷೇತ್ರದಲ್ಲಿ ಮೊಮ್ಮಗ ಪ್ರಜ್ವಲ್ಗೆ ಅಧಿಕೃತವಾಗಿ ಟಿಕೆಟ್ ಘೋಷಿಸಿದ್ದರು. ಆ ವೇಳೆ ಗೌಡರು ಭಾವುಕರೂ ಆಗಿದ್ದರು.
ಇದೀಗ ಕೊನೇಗಳಿಗೆಯಲ್ಲಿ ದೇವೇಗೌಡರು ಬೆಂಗಳೂರು ಉತ್ತರ ಅಥವಾ ತುಮಕೂರು ಯಾವ್ದೂ ಬೇಡ ಅಂತ ಪುನಃ ಹಾಸನದಿಂದಲೇ ಸ್ಪರ್ಧಿಸ್ತಾರೆ ಎಂಬ ಮಾಹಿತಿ ಸಿಕ್ಕಿದೆ. ಸಚಿವ ಹೆಚ್.ಡಿ ರೇವಣ್ಣ ಅವರು ಕೂಡ ದೇವೇಗೌಡರು ಹಾಸನದಲ್ಲಿಯೇ ನಿಲ್ಲಲಿ ಎಂಬ ಅಭಿಪ್ರಾಯ ಪಟ್ಟಿದ್ದಾರೆ.
ಪ್ರಜ್ವಲ್ ರೇವಣ್ಣ ಕ್ಷೇತ್ರದಲ್ಲಿ ಪ್ರಚಾರ ಆರಂಭಿಸಿದ್ದಾರೆ. ಆದರೆ, ತನ್ನ ತಾತಾ ದೇವೇಗೌಡರಿಗಾಗಿ ಕ್ಷೇತ್ರ ತ್ಯಾಗ ಮಾಡ್ತಾರಾ ಎಂಬ ಪ್ರಶ್ನೆ ಮೂಡುತ್ತಿದೆ.
ತಾತನಿಗಾಗಿ ಹಾಸನ ತ್ಯಾಗ ಮಾಡ್ತಾರಾ ಪ್ರಜ್ವಲ್ ರೇವಣ್ಣ..?
TRENDING ARTICLES