Friday, September 20, 2024

ಸ್ಟಾರ್​ಗಳಾಗಿ ಬಂದಿಲ್ಲ, ಮನೆ ಮಕ್ಕಳಾಗಿ ಬಂದಿದ್ದೇವೆ ಅಂದ್ರು ದರ್ಶನ್​, ಯಶ್..!

ಬೆಂಗಳೂರು : ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿರುವ ಸುಮಲತಾ ಅವರ ಪರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ರಾಕಿಂಗ್ ಸ್ಟಾರ್ ಯಶ್ ನಿಂತಿರೋದು ಗೊತ್ತೇ ಇದೆ.
ಇಂದು ಸುಮಲತಾ ನಡೆಸಿದ ಪ್ರೆಸ್​ಮೀಟ್​ನಲ್ಲೂ ದರ್ಶನ್ ಮತ್ತು ಯಶ್ ಇದ್ದರು. ಸುಮಲತಾ ಅವರು ಮಾತನಾಡಿ ತಾವು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸೋದಾಗಿ ಅಧಿಕೃತವಾಗಿ ಘೋಷಿಸಿ, ಮಾರ್ಚ್​ 20ಕ್ಕೆ ನಾಮಪತ್ರ ಸಲ್ಲಿಸುವುದಾಗಿ ತಿಳಿಸಿದ್ರು.
ಪ್ರೆಸ್​ಮೀಟ್​ನಲ್ಲಿ ಪಾಲ್ಗೊಂಡಿದ್ದ ದರ್ಶನ್ ಮತ್ತು ಯಶ್ ಇಬ್ಬರೂ ನಾವಿಲ್ಲಿ ನಟರಾಗಿ, ಸ್ಟಾರ್​ಗಳಾಗಿ ಬಂದಿಲ್ಲ. ಮನೆಯ ಮಕ್ಕಳಾಗಿ ಬಂದಿದ್ದೇವೆ ಎಂದರು. ಸುಮಲತಾ ಅವರ ಜೊತೆ ಯಾವತ್ತಿಗೂ ಇರ್ತೀವಿ ಅಂತ ಭರವಸೆಯನ್ನೂ ನೀಡಿದ್ರು.

ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಕಣಕ್ಕೆ..!

ಲತಾ ಪ್ರೆಸ್​ಮೀಟ್​ – ದರ್ಶನ್​, ಯಶ್ ಸಾಥ್..!

ಮಾ.20ಕ್ಕೆ ನಾಮಪತ್ರ ಸಲ್ಲಿಸಿ ಸುಮಲತಾ ಅಂಬರೀಶ್ ಶಕ್ತಿ ಪ್ರದರ್ಶನ..!

RELATED ARTICLES

Related Articles

TRENDING ARTICLES