ಬೆಂಗಳೂರು: ಅಮ್ಮನ ಜೊತೆ ನಾನು ಮಂಡ್ಯದ ಮೂಲೆ ಮೂಲೆಗೆ ಹೋಗಿದ್ದೇನೆ. ಎಲ್ಲಿಗೆ ಹೋದ್ರೂ ಜನ ಅಂಬರೀಶ್ ಅಣ್ಣ ಅಂತಿದ್ದಾರೆ. ಇವತ್ತು ನಮ್ಮ ಜೊತೆ ಇಬ್ಬರು ಅಣ್ಣಂದಿರು ಬಂದಿದ್ದಾರೆ ಅಂತ ಅಭಿಷೇಕ್ ಅಂಬರೀಶ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುಮಲತಾ ಅಂಬರೀಶ್ ಅವರು ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಭಿಷೇಕ್ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸುಮಲತಾ ಅವರು ಸ್ಪರ್ಧಿಸೋ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಹಾಗೆಯೇ ಯಶ್ ಹಾಗೂ ದರ್ಶನ್ ಅವರನ್ನು ಅಣ್ಣಂದಿರು ಅಂತ ಕರೆದಿದ್ದಾರೆ. ಅಭಿಷೇಕ್ ಅವರು ರಾಜಕೀಯಕ್ಕೆ ಬರುತ್ತಾರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನು ಸದ್ಯ ಚಿತ್ರರಂಗದಲ್ಲಿ ಇದ್ದೇನೆ. ಇಲ್ಲೇ ಇರುತ್ತೇನೆ. ರಾಜಕೀಯಕ್ಕೆ ಬರುವ ಬಗ್ಗೆ ಯೋಚನೆ ಮಾಡಿಲ್ಲ ಅಂತ ಹೇಳಿದ್ದಾರೆ.
ಲೋಕಸಭಾ ಚುನಾವಣೆಗೆ ಮಂಡ್ಯ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸೋದನ್ನು ಸುಮಲತಾ ಅಂಬರೀಶ್ ಸ್ಪಷ್ಟಪಡಿಸಿದ್ದಾರೆ. ನಟ ದರ್ಶನ್ ಹಾಗೂ ಯಶ್ ಅವರೂ ಸುಮಲತಾ ಅವರಿಗೆ ಬೆಂಬಲವನ್ನು ಘೋಷಿಸಿದ್ದಾರೆ. ಅಭಿಷೇಕ್ ಅಂಬರೀಶ್ ಅವರೂ ಸುಮಲತಾ ಅವರ ಜೊತೆ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಮಾರ್ಚ್ 20ರಂದು ಸುಮಲತಾ ಅವರು ನಾಮಪತ್ರ ಸಲ್ಲಿಸಲಿದ್ದಾರೆ.