Sunday, December 22, 2024

ಬಿಜೆಪಿ ಭದ್ರಕೋಟೆಗೆ ಕಾಂಗ್ರೆಸ್‌ನ ‘ಟ್ರಬಲ್‌ ಶೂಟರ್‌’ ಲಗ್ಗೆ..?

ಶಿವಮೊಗ್ಗ: ಜಲಸಂಪನ್ಮೂಲ ಸಚಿವ ಡಿ. ಕೆ ಶಿವಕುಮಾರ್​ ಅವರು ಬಿಜೆಪಿ ಭದ್ರಕೋಟೆ ಶಿವಮೊಗ್ಗಕ್ಕೆ ಲಗ್ಗೆ ಇಡಲಿದ್ದಾರೆ ಅನ್ನೋ ಮಾತು ಕೇಳಿ ಬರ್ತಿದೆ. ಕಾಂಗ್ರೆಸ್​ ಟ್ರಬಲ್ ಶೂಟರ್ ಡಿಕೆಶಿ ಶಿವಮೊಗ್ಗದಲ್ಲಿ ದೋಸ್ತಿ ಗೆಲುವಿನ ಹೊಣೆ ಹೊರುತ್ತಾರೆ ಅನ್ನೋ ಮಾತುಗಳೂ ಕೇಳಿ ಬರುತ್ತಿದ್ದು, ಡಿಕೆಶಿ ಎಂಟ್ರಿಯಾದಲ್ಲಿ ಶಿವಮೊಗ್ಗದಲ್ಲಿ ಬಿಎಸ್‌ವೈ ಪುತ್ರನಿಗೆ ಹೊಸ ಸವಾಲು ಎದುರಾಗಲಿದೆ.

ಬಿಜೆಪಿಯ ಭದ್ರಕೋಟೆ ಶಿವಮೊಗ್ಗದಲ್ಲಿ ಬಿಎಸ್​ವೈ ಪುತ್ರ ಬಿ.ವೈ.ರಾಘವೇಂದ್ರ ವಿರುದ್ಧ ಮಧು ಬಂಗಾರಪ್ಪ ಕಣಕ್ಕಿಳಿಯಲಿದ್ದಾರೆ. ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸಲು ಕಾಂಗ್ರೆಸ್ ಟ್ರಬಲ್ ಶೂಟರ್​ ಫೀಲ್ಡ್‌ಗಿಳಿಯಲಿದ್ದಾರಾ ಅನ್ನೋದು ಕುತೂಹಲ ಮೂಡಿಸಿದೆ. ಕಾಂಗ್ರೆಸ್​ ನಾಯಕ ಎಂಟ್ರಿಯಾದಲ್ಲಿ ಕೇಸರಿ ಪಡೆ ಕಂಗಾಲಾಗಲಿದೆ. ಕೇಸರಿ ಕೋಟೆಯಲ್ಲಿ ಕಾಂಗ್ರೆಸ್‌ ಧ್ವಜ ಹಾರಿಸಲು ರಣತಂತ್ರ ರೂಪಿಸಲಾಗಿದ್ದು, ಕಾಂಗ್ರೆಸ್​ ಶಿವಮೊಗ್ಗದಲ್ಲಿ ವಿಜಯಪತಾಕೆ ಹಾರಿಸುತ್ತಾ ಅನ್ನೋದು ತೀವ್ರ ಕುತೂಹಲ ಸೃಷ್ಟಿಸಿದೆ. ಶಿವಮೊಗ್ಗ ಲೋಕಸಭಾ ಕಣದಲ್ಲಿ ಶಿವಕುಮಾರ್ ಅವರು ದೋಸ್ತಿ ಅಭ್ಯರ್ಥಿಗೆ ಆನೆಬಲ ತುಂಬುತ್ತಾರಾ ಅನ್ನೋದನ್ನು ಕಾದುನೋಡಬೇಕಿದೆ.

RELATED ARTICLES

Related Articles

TRENDING ARTICLES