Sunday, December 22, 2024

ಡಿಕೆ ಬ್ರದರ್ಸ್ ಕೋಟೆಗೆ ಯೋಗೇಶ್ವರ್​ ಲಗ್ಗೆ ಹಾಕೋದು ಕನ್ಫರ್ಮ್​..!

ಬೆಂ.ಗ್ರಾಮಾಂತರ: ತೀವ್ರ ಕುತೂಹಲ ಕೆರಳಿಸಿದ್ದ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಫೈನಲ್ ಆಗಿದೆ. ಮಾಜಿ ಸಚಿವ ಚನ್ನಪಟ್ಟಣದ ಸಿ.ಪಿ ಯೋಗೇಶ್ವರ್ ಸ್ಪರ್ಧೆ ಮಾಡೋದು ಕನ್ಫರ್ಮ್ ಆಗಿದೆ. ಇಂದು 11ಗಂಟೆಗೆ ಯೋಗೇಶ್ವರ್​ ಅವರು ಸುದ್ದಿಗೋಷ್ಠಿ ನಡೆಸಿ ಈ ಬಗ್ಗೆ ಮಾತನಾಡಲಿದ್ದಾರೆ.

ಇಷ್ಟು ದಿನದ ಅಭ್ಯರ್ಥಿ ಆಯ್ಕೆ ಕಸರತ್ತು ಕೊನೆಗೂ ಅಂತಿಮ ಆಗಿದೆ. ಈಗಾಗಲೇ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಹಾಲಿ ಸಂಸದ ಡಿ.ಕೆ ಸುರೇಶ್ ಕಣಕ್ಕಿಳಿಯೋದು ಖಚಿತವಾಗಿದೆ. ಈ ಹಿನ್ನಲೆಯಲ್ಲಿ ಡಿಕೆ ಬ್ರದರ್ಸ್ ಗೆ ಟಾಂಗ್ ಕೊಡಲು ಸಮರ್ಥ ಅಭ್ಯರ್ಥಿ ಎಂದು ಯೋಗೇಶ್ವರ್ ಅವರನ್ನು ಹೈಕಮಾಂಡ್ ಆಯ್ಕೆ ಮಾಡಿದೆ.

RELATED ARTICLES

Related Articles

TRENDING ARTICLES