ಕಾರವಾರ : ‘ನಮ್ಮ ಅಪ್ಪನೇ ನಂಗೆ ವೋಟ್ ಹಾಕಿರಲಿಲ್ಲ’ ಅಂತ ಕೇಂದ್ರ ಸಚಿವ ಅನಂತ್ಕುಮಾರ್ ಹೆಗಡೆ ಹೇಳಿದ್ದಾರೆ.
ಉತ್ತರ ಕನ್ನಡದ ಕಾರವಾರದಲ್ಲಿ ಮಾತನಾಡಿದ ಅವರು, ನಂಗೆ ಮೊದಲ ಬಾರಿ ಟಿಕೆಟ್ ಸಿಕ್ಕಾಗ ನಮ್ಮ ಅಪ್ಪ ವಿರೋಧಿಸಿದ್ದರು. ಬಿಜೆಪಿ ಟಿಕೆಟ್ ಸಿಕ್ಕಾಗ ಬೈದಿದ್ದರು. ಕಾಂಗ್ರೆಸ್ ಬಿಟ್ಟು ನೀನು ಬಿಜೆಪಿಗೆ ಹೋಗಿದ್ಯ ಎಂದಾದರೆ ನೀನು ನಮ್ ಮನೆತನಕ್ಕೆ ಕಳಂಕ ಅಂದಿದ್ದರು. ಅವರಿಗೆ ಕಾಂಗ್ರೆಸ್ ಬಿಟ್ಟು ಬೇರೆ ಪಕ್ಷಕ್ಕೆ ವೋಟ್ ಹಾಕಿ ಗೊತ್ತಿರಲಿಲ್ಲ. ಕಳೆದ 5 ಬಾರಿ ಚುನಾವಣೆಯಲ್ಲಿ ನಮ್ಮಪ್ಪ ನಂಗೆ ವೋಟ್ ಆಗಿದ್ದಾರೆ ಅಂತ ನಂಗೆ ಗೊತ್ತಿಲ್ಲ. ಆದ್ರೆ, ಈ ಬಾರಿ ನಮ್ಮಪ್ಪ ಬಂದು ಈ ಬಾರಿ ಬಿಜೆಪಿಗೆ ವೋಟ್ ಕೊಡುವ ಅಂತ ಮಾಡಿದ್ದೀನಿ. ನಿನ್ ನೋಡಿ ಅಲ್ಲ, ಮೋದಿ ನೋಡಿ ಅಂತ ಹೇಳಿದ್ರು’ ಎಂದರು.
ಈಗ ಪರಿಸ್ಥಿತಿ ಬದಲಾಗಿದೆ. ಕಾಂಗ್ರೆಸ್ ಅವರಿಗೆ ತಮ್ಮವರಿಗೆ ಟಿಕೆಟ್ ಕೊಡೋ ಮನಸ್ಸೇ ಇಲ್ಲ. ಜೆಡಿಎಸ್ಗೆ ಕೊಟ್ರೆ ಸಾಕು ಅಂತ ಅವರಿಗೆ ಟಿಕೆಟ್ ಕೊಡ್ತಿದ್ದಾರೆ ಎಂದು ವ್ಯಂಗ್ಯವಾಡಿದ್ರು.
ಅಪ್ಪನೇ ನಂಗೆ ವೋಟ್ ಮಾಡಿರ್ಲಿಲ್ಲ : ಅನಂತ್ ಕುಮಾರ್ ಹೆಗಡೆ
TRENDING ARTICLES