Wednesday, May 22, 2024

ಕಳೆದ ಬಾರಿ ಮೋದಿ ಅಲೆ, ಈ ಬಾರಿ ಮೋದಿ ಸುನಾಮಿ : ಪ್ರತಾಪ್​ ಸಿಂಹ

ಮೈಸೂರು : ಕಳೆದ ಬಾರಿ ಮೋದಿ ಅಲೆ ಇತ್ತು. ಈ ಬಾರಿ ಮೋದಿ ಸುನಾಮಿ ಇದೆ ಅಂತ ಮೈಸೂರು-ಕೊಡಗು ಸಂಸದ ಪ್ರತಾಪ್​ ಸಿಂಹ ಹೇಳಿದರು.
ಮೈಸೂರಿನಲ್ಲಿ ಪವರ್ ಟಿವಿ ಪ್ರತಿನಿಧಿ ಜೊತೆ ಮಾತನಾಡಿದ ಅವರು, ಕಳೆದ 5 ವರ್ಷಗಳಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳಷ್ಟೇ ನನ್ನ ತಯಾರಿ. 1990 ರಿಂದ 2014ರವರೆಗಿನ ಮೈಸೂರಿನ ಸಂಸದರನ್ನು ಒಂದು ತಕ್ಕಡಿಯಲ್ಲಿಡಿ. ಕಳೆದ 5 ವರ್ಷಗಳಲ್ಲಿ ನಾನು ಮೈಸೂರಿಗೆ ತಂದ ಅಭಿವೃದ್ಧಿ ಕಾರ್ಯಗಳನ್ನು ಒಂದು ತಕ್ಕಡಿಯಲ್ಲಿಡಿ. ಯಾವುದು ಹೆಚ್ಚು ತೂಗುತ್ತೆ ಎಂದು ತೂಕಮಾಡಿ ಮತದಾನದ ನಿರ್ಧಾರ ಮಾಡಿ ಎಂದರು.
ಕಳೆದ ಬಾರಿ ನಾನು ಮೈಸೂರಿಗೆ ಹೊಸಬನಾಗಿದ್ದೆ. ಕಾಂಗ್ರೆಸ್ ಆಡಳಿತವಿತ್ತು..ಆಗಲೇ ಗೆದ್ದಿದ್ದೀನಿ. ಈ ಬಾರಿ 5 ವರ್ಷದ ಅಭಿವೃದ್ಧಿ ಬಲವಿದೆ. ಕಾರ್ಯಕರ್ತರಿದ್ದಾರೆ. ನಂಗೆ ಎದುರಾಳಿ ಯಾರೂ ಇಲ್ಲ. ತನ್ನ ಕ್ಷೇತ್ರದಲ್ಲಿ ಬಡತನ ಹೋಗಲಾಡಿಸುವುದೊಂದೇ ಎದುರಾಳಿ ಎಂದು ಹೇಳಿದ್ರು. ಕಳೆದ ಬಾರಿ ಮೋದಿ ಅಲೆ ಇತ್ತು ಈ ಬಾರಿ ಮೋದಿ ಸುನಾಮಿ ಇದೆ ಎಂದು ಅಭಿಪ್ರಾಯಪಟ್ಟರು.

RELATED ARTICLES

Related Articles

TRENDING ARTICLES