Monday, December 9, 2024

ದರ್ಶನ್​, ಯಶ್ ವಿರುದ್ಧ ಗೋ ಬ್ಯಾಕ್​ ಕ್ಯಾಂಪೇನ್​..! ಕಾರಣ ಏನ್ ಗೊತ್ತಾ?

ಮಂಡ್ಯ : ಲೋಕಸಭಾ ಚುನಾವಣಾ ಕಣ ರಂಗೇರಿದೆ. ದಿನಕ್ಕೊಂದು, ಕ್ಷಣಕ್ಕೊಂದು ಬದಲಾವಣೆಗಳು ನಡೆಯುತ್ತಿವೆ. ಸ್ಟಾರ್​ ವಾರ್​ಗೆ ವೇದಿಕೆ ಆಗಲಿರುವ ಮಂಡ್ಯ ರಣಕಣವಂತೂ ಸಿಕ್ಕಾಪಟ್ಟೆ ಕಾವೇರಿದೆ.
ನಿಖಿಲ್ ಕುಮಾರಸ್ವಾಮಿ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿಯೋದು ಪಕ್ಕಾ ಆಗಿದೆ. ಸುಮಲತಾ ಅಂಬರೀಶ್ ಪಕ್ಷೇತರರಾಗಿ ಕಣಕ್ಕಿಳಿಯಲು ರೆಡಿಯಾಗಿದ್ದಾರೆ.
ಮಂಡ್ಯದಲ್ಲಿ ನಿಖಿಲ್​ ಕುಮಾರಸ್ವಾಮಿ ಸ್ಪರ್ಧೆ ವಿರೋಧಿಸಿ, ಸುಮಲತಾ ಅವರಿಗೆ ಬೆಂಬಲ ಸೂಚಿಸಿ ಸುಮಲತಾ ಅಭಿಮಾನಿಗಳು ಗೋ ಬ್ಯಾಕ್​ ನಿಖಿಲ್​ ಕ್ಯಾಂಪೇನ್ ಶುರು ಮಾಡಿದ್ರು. ಈಗ ಅದಕ್ಕೆ ಪ್ರತಿಯಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ರಾಕಿಂಗ್ ಸ್ಟಾರ್ ಯಶ್ ವಿರುದ್ಧ ಗೋ- ಬ್ಯಾಕ್​ ಕ್ಯಾಂಪೇನ್ ನಡೆಸುವ ಎಚ್ಚರಿಕೆಯನ್ನು ಜೆಡಿಎಸ್​ ಕಾರ್ಯಕರ್ತರು ನೀಡಿದ್ದಾರೆ.
ದರ್ಶನ್ ಮತ್ತು ಯಶ್ ಅವರ ಮೇಲೆ ಬಹಳ ಅಭಿಮಾನವಿದೆ. ಆದ್ರೆ, ಪ್ರಚಾರಕ್ಕೆ ಬಂದ್ರೆ ಮಾತ್ರ ಸಹಿಸಲ್ಲ. ಗೋ ಬ್ಯಾಕ್ ದರ್ಶನ್, ಗೋ ಬ್ಯಾಕ್​ ಯಶ್ ಅಂತ ಅಭಿಯಾನ ಶುರು ಮಾಡ್ತೀವಿ. ಪ್ರಚಾರಕ್ಕೆ ಬರಲೇ ಬಾರದು. ಬೇಕಾದ್ರೆ ಯಾವ್ದಾದ್ರು ಪಕ್ಷದಿಂದ ಕಣಕ್ಕಿಳಿಯಲಿ ಅಂತ ಜೆಡಿಎಸ್ ಕಾರ್ಯಕರ್ತರು ಎಚ್ಚರಿಕೆ ನೀಡಿದ್ದಾರೆ.
ನಿಖಿಲ್​ ಕುಮಾರಸ್ವಾಮಿ ಅವರು ಜೆಡಿಎಸ್​ ಅಭ್ಯರ್ಥಿತಿಯಾಗಿದ್ದು, ಸುಮಲತಾ ಅವರು ನಿಖಿಲ್ ವಿರುದ್ಧ ಕಣದಲ್ಲಿದ್ದಾರೆ. ಸುಮಲತಾ ಅವರ ಪರ ದರ್ಶನ್ ಮತ್ತು ಯಶ್ ಪ್ರಚಾರಕ್ಕೆ ಬಂದರೆ ತಮ್ಮ ಜೆಡಿಎಸ್​ ಅಭ್ಯರ್ಥಿಗೆ ದೊಡ್ಡ ಪೆಟ್ಟು ಅನ್ನೋ ಉದ್ದೇಶದಿಂದ ಜೆಡಿಎಸ್​ ಕಾರ್ಯಕರ್ತರು ಗೋ ಬ್ಯಾಕ್​ ದರ್ಶನ್, ಗೋ ಬ್ಯಾಕ್​ ಯಶ್ ಅಂತ ಕ್ಯಾಂಪೇನ್ ಶುರು ಮಾಡೋ ಎಚ್ಚರಿಕೆ ನೀಡಿದ್ದಾರೆ. ದರ್ಶನ್​, ಯಶ್ ಚುನಾವಣೆಗೆ ಸ್ಪರ್ಧಿಸೋದಕ್ಕೆ ಕಾರ್ಯಕರ್ತರ ಆಕ್ಷೇಪವಿಲ್ಲ. ಸುಮಲತಾ ಅವರ ಪರ ಪ್ರಚಾರಕ್ಕೆ ಮಾತ್ರ ವಿರೋಧವಿದೆ.

RELATED ARTICLES

Related Articles

TRENDING ARTICLES