ಮಂಡ್ಯ : ಲೋಕಸಭಾ ಚುನಾವಣೆ ಡೇಟ್ ಅನೌನ್ಸ್ ಆಗುವ ಮುನ್ನವೇ ರಂಗೇರಿದ್ದ ಮಂಡ್ಯ ಲೋಕಸಭಾ ಚುನಾವಣಾ ಕಣ ಈಗ ಮತ್ತಷ್ಟು ಸದ್ದು ಮಾಡ್ತಿದೆ. ರಾಜ್ಯದ 28 ಕ್ಷೇತ್ರಗಳಲ್ಲಿ ಮಂಡ್ಯ ಕ್ಷೇತ್ರವೇ ಹೆಚ್ಚು ಗಮನಸೆಳೆಯುತ್ತಿದೆ, ಜೊತೆಗೆ ಸಿಕ್ಕಾಪಟ್ಟೆ ಕುತೂಹಲವನ್ನು ಹುಟ್ಟುಹಾಕಿದೆ.
ಮೈತ್ರಿ ಅಭ್ಯರ್ಥಿಯಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರು ಕಣಕ್ಕಿಳಿಯಲು ರೆಡಿಯಾಗಿದ್ದಾರೆ. ಹೀಗಾಗಿ ಟಿಕೆಟ್ ನಿರೀಕ್ಷಿಸಿದ್ದ ಸುಮಲತಾ ಅಂಬರೀಶ್ ಅವರಿಗೆ ‘ಕೈ’ ಕೊಟ್ಟಿದೆ ಕಾಂಗ್ರೆಸ್..! ‘ಕೈ’ ಟಿಕೆಟ್ ಸಿಗದೇ ಇದ್ರೆ ಏನಂತೆ, ನಾನು ಪಕ್ಷೇತರಳಾಗಿ ಕಣಕ್ಕಿಳಿಯುತ್ತೇನೆ ಅಂತ ಡಿಸೈಡ್ ಮಾಡಿದ್ದಾರೆ ಸುಮಲತಾ ಅಂಬರೀಶ್. ಆದ್ದರಿಂದ ಮಂಡ್ಯ ಸ್ಟಾರ್ ವಾರ್ಗೆ ವೇದಿಕೆಯಾಗಿದೆ.
ಈ ನಡುವೆ ಮದ್ದೂರಿನಲ್ಲಿ ಸಚಿವ ಡಿ.ಸಿ ತಮ್ಮಣ್ಣ ಅವರು ಹೊಸ ಬಾಂಬ್ ಸಿಡಿಸಿದ್ದಾರೆ. ಸುಮಲತಾ ಅವರಿಗೆ ಜೆಡಿಎಸ್ ಟಿಕೆಟ್ ಕೊಡಿಸುವ ಯತ್ನವನ್ನು ತಮ್ಮಣ್ಣ ಮಾಡಿದ್ದರಂತೆ. ಒಂದು ವೇಳೆ ಸುಮಲತಾ ಅಂಬರೀಶ್ ಅವರು ತೆನೆ ಹೊರಲು ರೆಡಿಯಾಗಿದ್ದರೆ ನಿಖಿಲ್ ಬದಲಿಗೆ ಅವರೇ ಮಂಡ್ಯದ ಜೆಡಿಎಸ್ ಅಭ್ಯರ್ಥಿ ಆಗುತ್ತಿದ್ದರಂತೆ..!
ಈ ಬಗ್ಗೆ ಪವರ್ ಟಿವಿಗೆ ಎಕ್ಸ್ಕ್ಲೂಸಿವ್ ಮಾಹಿತಿ ಸಿಕ್ಕಿದೆ. ಅದು ಯಾರೋ ಹೇಳಿದ ಅಂತೆ-ಕಂತೆಗಳ ಸಂತೆ ಪುರಾಣವಲ್ಲ..! ಸ್ವತಃ ತಮ್ಮಣ್ಣ ಅವರೇ ನೀಡಿರೋ ಮಾಹಿತಿ..! ‘ಸುಮಲತಾ ಅವರನ್ನು ಜೆಡಿಎಸ್ ಕ್ಯಾಂಡಿಡೇಟ್ ಮಾಡೋ ಆಸೆಯಿತ್ತು. ಜೆಡಿಎಸ್ ವರಿಷ್ಠರನ್ನು ಭೇಟಿ ಮಾಡಿಸೋ ಪ್ರಯತ್ನ ಮಾಡಿದ್ದೆ, ಸಂಬಂಧಿ ಮಧು ಮೂಲಕ ಮಾಡಿದ್ದ ಆ ಪ್ರಯತ್ನ ವಿಫಲವಾಯ್ತು. ಹೆಚ್ಡಿಕೆ ಮತ್ತು ಸುಮಲತಾ ಅವರ ನಡುವೆ ಏನು ನಡೆದಿದೆಯೋ ಗೊತ್ತಿಲ್ಲ. ಹಾಗಾಗಿ ಮಾತುಕತೆ ವಿಫಲವಾಗಿದೆ’ ಎಂದಿದ್ದಾರೆ ಡಿ.ಸಿ ತಮ್ಮಣ್ಣ.
ಜೆಡಿಎಸ್ ಸೇರಲು ನಿರಾಕರಿಸಿದರಾ ಸುಮಲತಾ? ಡಿ.ಸಿ ತಮ್ಮಣ್ಣ ಅವರ ಪ್ರಯತ್ನ ವಿಫಲವಾಗಿದ್ದೇಕೆ?
TRENDING ARTICLES