ಮಂಡ್ಯ : ನನಗೆ ಚಿತ್ರರಂಗದ ಬೆಂಬಲದ ಅವಶ್ಯಕತೆ ಇಲ್ಲ. ನಮ್ಮ ಪಕ್ಷದ ಕಾರ್ಯಕರ್ತರೇ ಯೋಧರಿದ್ದಂತೆ. ನಮ್ಮ ಕಾರ್ಯಕರ್ತರೇ ಎಲ್ಲವನ್ನು ನೋಡಿಕೊಳ್ಳುತ್ತಾರೆ. ಕನ್ನಡ ಚಿತ್ರರಂಗದರನ್ನು ಕರೆಯುವ ಅವಶ್ಯಕತೆ ಇಲ್ಲ ಎಂದು ಮಂಡ್ಯ ಜೆಡಿಎಸ್ ನಿಯೋಜಿತ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ಮಂಡ್ಯದಲ್ಲಿ ಮಾತನಾಡಿದ ಅವರು, ‘ರಾಜಕಾರಣ ಬೇರೆ.. ಸಂಬಂಧಗಳನ್ನು ರಾಜಕಾರಣ ಹಾಳು ಮಾಡಬಾರದು. ನಾನು ಅದರಲ್ಲಿ ನಂಬಿಕೆ ಇಟ್ಟಿದ್ದೇನೆ. ಅಭಿಷೇಕ್ ನನ್ನ ಒಳ್ಳೆಯ ಸ್ನೇಹಿತ. ಸ್ನೇಹಿತನಾಗಿಯೇ ಉಳಿಯುತ್ತಾನೆ. ಪಕ್ಷ ತೀರ್ಮಾನ ಮಾಡಿ ನನ್ನನ್ನು ಕಣಕ್ಕಿಳಿಸಿದೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ದುಡಿಯಲು ರೆಡಿಯಾಗಿದ್ದೇನೆ. ಇತ್ತೀಚಿನ ದಿನಗಳಲ್ಲಿ ಅಭಿಷೇಕ್ ಜೊತೆ ಮಾತಾಡಿಲ್ಲ. ನಾವು ಬ್ಯುಸಿ ಇದ್ದೇವೆ, ಅವ್ರೂ ಬ್ಯುಸಿ ಇದ್ದಾರೆ. ಎಲೆಕ್ಷನ್ ಮುಗಿದ ಮೇಲೆ ಮಾತಾಡ್ತೀವಿ’ ಎಂದರು.
ಪ್ರಚಾರಕ್ಕೆ ಸಂಬಂಧಪಟ್ಟಂತೆ ಚಿತ್ರರಂಗದವರನ್ನು ಕರೆಯುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ‘ ಆ ಬಗ್ಗೆ ನಾನು ಯಾರನ್ನೂ ಸಂಪರ್ಕಿಸಿಲ್ಲ. ನನ್ನನ್ನೂ ಯಾರು ಸಂಪರ್ಕಿಸಿಲ್ಲ. ನಾನೊಬ್ಬ ಚಿತ್ರನಟ…ರಾಜಕೀಯಕ್ಕೆ ಚಿತ್ರರಂಗದವರನ್ನು ದುರುಪಯೋಗಪಡಿಸಿಕೊಳ್ಳೋಕೆ ರೆಡಿ ಇಲ್ಲ. ಅದು ತಪ್ಪು ಅಂತ ನಾನು ಹೇಳ್ತಾ ಇಲ್ಲ. ಆದರೆ, ನಂಗದು ಇಷ್ಟವಿಲ್ಲ. ನಂಗೆ ಕಾರ್ಯಕರ್ತರಿದ್ದಾರಲ್ಲ. ಅವರೇ ನಂಗೆ ಯೋಧರಿದ್ದಂತೆ’ ಎಂದು ಹೇಳಿದ್ರು.
ಚಿತ್ರರಂಗದ ಬೆಂಬಲದ ಅವಶ್ಯಕತೆ ಇಲ್ಲ ಅಂದ್ರು ನಿಖಿಲ್ ಕುಮಾರಸ್ವಾಮಿ..!
TRENDING ARTICLES