Sunday, December 22, 2024

ಒಂದೇ ವೇದಿಕೆಯಲ್ಲಿ ದೇವೇಗೌಡ್ರು, ರೇವಣ್ಣ, ಪ್ರಜ್ವಲ್​ ಕಣ್ಣೀರು ಹಾಕಿದ್ದೇಕೆ..?

ಹಾಸನ : ಲೋಕಸಭಾ ಎಲೆಕ್ಷನ್ ಅನೌನ್ಸ್ ಆಗಿದ್ದೇ ತಡ ರಾಜಕೀಯ ನಾಯಕರು ಪ್ರಚಾರದಲ್ಲಿ ಫುಲ್ ಬ್ಯುಸಿ ಇದ್ದಾರೆ. ಹಾಸನದಲ್ಲಿಂದು ಕಣ್ಣೀರು ರಾಜಕೀಯ ನಡೆದಿದೆ..!
ಜೆಡಿಎಸ್​​ ಅಭ್ಯರ್ಥಿ ಪ್ರಜ್ವಲ್​ ರೇವಣ್ಣ ಅವರ ಪ್ರಚಾರ ಸಭೆಯಲ್ಲಿ ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡರು, ಸಚಿವ ಹೆಚ್.ಡಿ ರೇವಣ್ಣ ಸೇರಿದಂತೆ ಜೆಡಿಎಸ್ ಶಾಸಕರು, ಕೆಲ ಮುಖಂಡರು ಕಣ್ಣೀರು ಹಾಕಿದ್ದಾರೆ..!
ಹೆಚ್​.ಡಿ ದೇವೇಗೌಡರು ನಾನು ಕುಟುಂಬ ರಾಜಕಾರಣ ಮಾಡಿಲ್ಲ. ಎಲ್ಲರಲ್ಲೂ ಬೆಳೆಸುವ ಪ್ರಯತ್ನ ಮಾಡಿದ್ದೇನೆ ಎಂದು ಕಣ್ಣೀರಿಟ್ಟರು. ಭಾಷಣದ ವೇಳೆ ಶ್ರವಣಬೆಳೆಗೊಳದ ಶಾಸಕ ಸಿ.ಎನ್​ ಬಾಲಕೃಷ್ಣ ಕಣ್ಣೀರು ಹಾಕಿದ್ರು. ಇದನ್ನು ನೋಡಿ ಸಚಿವ ಹೆಚ್​,ಡಿ ರೇವಣ್ಣ ಕೂಡ ಭಾವುಕರಾದರು.
ದೇವೇಗೌಡರು ಪ್ರಜ್ವಲ್​ ರೇವಣ್ಣ ಅವರೇ ಹಾಸನದ ಕ್ಯಾಂಡಿಡೇಟ್ ಅಂತ ಅನೌನ್ಸ್ ಮಾಡಿದಾಗ ಸ್ವತಃ ಪ್ರಜ್ಚಲ್​ ರೇವಣ್ಣ ಅವರ ಕಣ್ಣಾಲಿಗಳು ಆನಂದಭಾಷ್ಪದಿಂದ ತೇವಗೊಂಡಿತು.

RELATED ARTICLES

Related Articles

TRENDING ARTICLES