Thursday, December 26, 2024

‘ದೇವೇಗೌಡ ನಾಟಕ ಮಂಡಳಿಯ ಅಧಿಕೃತ ರಂಗಪ್ರವೇಶ’ : ಸಿ.ಟಿ ರವಿ

ಬೆಂಗಳೂರು : ಹಾಸನದಲ್ಲಿ ನಡೆದ ಪ್ರಜ್ವಲ್​ ರೇವಣ್ಣ ಅವರ ಪ್ರಚಾರ ಸಭೆಯಲ್ಲಿ ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡ, ಸಚಿವ ಹೆಚ್​.ಡಿ ರೇವಣ್ಣ ಮತ್ತು ಪ್ರಜ್ವಲ್​ ರೇವಣ್ಣ ಅವರು ಕಣ್ಣೀರು ಹಾಕಿದ್ದಕ್ಕೆ ಬಿಜೆಪಿ ವ್ಯಂಗ್ಯವಾಡಿದೆ.
ಬಿಜೆಪಿ ತನ್ನ ಅಧಿಕೃತ ಟ್ವೀಟರ್ ಖಾತೆಯಲ್ಲಿ,’2019ರ ಚುನಾವಣೆಯ ಮೊದಲ ಡ್ರಾಮ ಈಗ ಶುರುವಾಗಿದೆ’ ಎಂದು ದೇವೇಗೌಡರು ಕಣ್ಣೀರಿಡುವ ಫೋಟೋ ಹಾಕಿ ಟ್ವೀಟ್ ಮಾಡಿದೆ.
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು, ‘ಚುನಾವಣೆಗೆ ಕ್ಷೇತ್ರದ “ಅಭಿವೃದ್ಧಿ” ಅಸ್ತ್ರವಾಗಬೇಕು! “ಅಳು” ಅಲ್ಲ’..! ಎಂದು ಟ್ವೀಟ್​ ಮಾಡಿದ್ದಾರೆ.
‘ಚುನಾವಣೆ ಹತ್ತಿರ ಬರುವುದಕ್ಕೂ ದೇವೇಗೌಡರ ಕುಟುಂಬದ ಸದಸ್ಯರು ಕಣ್ಣೀರು ಸುರಿಸುವುದಕ್ಕೂ ಎತ್ತಣ ಸಂಬಂಧ ಸರ್ವಜ್ಞ? ದೇವೇಗೌಡ ನಾಟಕ ಮಂಡಳಿ ಅಧಿಕೃತವಾಗಿ ರಂಗಪ್ರವೇಶ ಮಾಡಿದಂತಾಯಿತು’ ಎಂದು ಶಾಸಕ ಸಿ.ಟಿ ರವಿ ಟ್ವೀಟ್​ ಮಾಡಿದ್ದಾರೆ.

RELATED ARTICLES

Related Articles

TRENDING ARTICLES