Wednesday, January 22, 2025

ದೇವೇಗೌಡರ ವಿರುದ್ಧವೂ ಶುರುವಾಯ್ತು ಗೋ ಬ್ಯಾಕ್​ ಅಭಿಯಾನ

ತುಮಕೂರು : ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರ ವಿರುದ್ಧವೂ ಸೋಶಿಯಲ್​ ಮೀಡಿಯಾದಲ್ಲಿ ಗೋ ಬ್ಯಾಕ್ ಕ್ಯಾಂಪೇನ್​ ಶುರುವಾಗಿದೆ. ತುಮಕೂರಲ್ಲಿ ದೇವೇಗೌಡರು ಸ್ಪರ್ಧಿಸೋದು ಬೇಡ, ಹಾಲಿ ಸಂಸದ ಎಸ್​.ಪಿ ಮುದ್ದಹನುಮೇಗೌಡ ಅವರೇ ಸ್ಪರ್ಧಿಸಲು ಅಂತ ನೆಟ್ಟಿಗರು ಒತ್ತಾಯಿಸುತ್ತಿದ್ದಾರೆ.
‘ದೇವೇಗೌಡರೇ ತುಮಕೂರಿಗೆ ವಲಸೆ ಬರಬೇಡಿ. ಕಾಂಗ್ರೆಸ್​ನ ಮುದ್ದಹನುಮೇಗೌಡ ಅವರಿಗೇ ಟಿಕೆಟ್​ ನೀಡಿ’ ಎಂಬ ಪೋಸ್ಟ್​​ಗಳು ಹರಿದಾಡುತ್ತಿವೆ. ‘ತುಮಕೂರು ಲೋಕಸಭಾ ಚುನಾವಣೆಗೆ ಎಸ್​.ಪಿ ಮುದ್ದಹನುಮೇಗೌಡರಿಗೆ ಟಿಕೆಟ್​ ಕೊಡಲೇ ಬೇಕು. ಇಲ್ಲದಿದ್ದರೆ ಬೇರೆ ಯಾರು ಬಂದರು ಸೋಲು ಖಚಿತ. ಮುಂದೆ ಕಾಂಗ್ರೆಸ್​ಗೆ ತುಂಬಲಾರದ ನಷ್ಟ ಖಚಿತ. ವಿ ಸಪೋರ್ಟ್​​ ಎಸ್​ಪಿಎಂ’ ಎನ್ನುವ ಪೋಸ್ಟ್ ಕೂಡ ಹರಿದಾಡುತ್ತಿದೆ. 

ಇನ್ನು ಮಂಡ್ಯದಲ್ಲಿ ನಿಖಿಲ್​ ಅವರ ವಿರುದ್ಧ ಸೋಶಿಯಲ್​ ಮೀಡಿಯಾದಲ್ಲಿ ನಡೆದ ‘ಗೋ ಬ್ಯಾಕ್​ ನಿಖಿಲ್ -ವಿ ಸಪೋರ್ಟ್ ಸುಮಲತಾ’ ಕ್ಯಾಂಪೇನ್​ ಅನ್ನು ಇಲ್ಲಿ ಸ್ಮರಿಸಬಹುದು. 

ದೇವೇಗೌಡರು ತುಮಕೂರಲ್ಲಿ ಸ್ಪರ್ಧಿಸ್ತಾರೆ ಎಂಬ ಚರ್ಚೆ ಇದೆ. ಆದರೆ, ಅವರು ಬೆಂಗಳೂರು ಉತ್ತರದಿಂದ ಕಣಕ್ಕಿಳಿಯೋದು ಬಹುತೇಕ ಕನ್ಫರ್ಮ್ ಆಗಿದೆ.

RELATED ARTICLES

Related Articles

TRENDING ARTICLES