Friday, January 10, 2025

ದೇವೇಗೌಡ್ರು ಲೋಕ ಅಖಾಡಕ್ಕೆ ಇಳಿಯೋದು ಫಿಕ್ಸ್ … ಕ್ಷೇತ್ರ ಯಾವ್ದು?

ಬೆಂಗಳೂರು : ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡರು ತಮ್ಮ ಕ್ಷೇತ್ರ ಹಾಸನವನ್ನು ಮೊಮ್ಮಗ ಪ್ರಜ್ವಲ್​ ರೇವಣ್ಣ ಅವರಿಗೆ ಬಿಟ್ಟು ಕೊಟ್ಟಿದ್ದಾರೆ. ಹಾಸನದಿಂದ ಪ್ರಜ್ವಲ್ ಕಣಕ್ಕಿಳಿಯೋದು ಕನ್ಫರ್ಮ್. ಹೀಗಾಗಿ ಗೌಡರು ಎಲ್ಲಿಂದ ಸ್ಪರ್ಧಿಸ್ತಾರೆ ಅನ್ನೋದು ಕುತೂಹಲಕ್ಕೆ ಎಡೆಮಾಡಿಕೊಟ್ಟಿತ್ತು.
ದೇವೇಗೌಡರು ಈ ಬಾರಿ ಚುನಾವಣೆಗೆ ಸ್ಪರ್ಧಿಸಲ್ಲ ಎಂಬ ಮಾತು ಕೂಡ ಕೇಳಿಬಂದಿತ್ತು. ಅದರಿಂದಾಚೆಗೆ ತುಮಕೂರು, ಚಿಕ್ಕಬಳ್ಳಾಪುರ ಹೀಗೆ ಕೆಲವೊಂದು ಕ್ಷೇತ್ರಗಳಲ್ಲಿ ದೇವೇಗೌಡರ ಸ್ಪರ್ಧೆ ವಿಷಯ ಚರ್ಚೆಯಾಗಿತ್ತು. ದೇವೇಗೌಡರು ಅಲ್ಲಿಂದ ಕಣಕ್ಕಿಳಿಯುತ್ತಾರೆ, ಇಲ್ಲಿಂದ ಕಣಕ್ಕಿಳಿಯುತ್ತಾರೆ ಅನ್ನೋ ಅಂತೆ-ಕಂತೆಗಳಿಗೆ ಈಗ ತೆರೆಬಿದ್ದಿದೆ. ದೇವೇಗೌಡರು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯೋದು ಬಹುತೇಕ ಖಚಿತವಾಗಿದೆ. ಪವರ್ ಟಿವಿಗೆ ಜೆಡಿಎಸ್ ಮೂಲಗಳಿಂದ ಈ ಬಗ್ಗೆ ಮಾಹಿತಿ ಸಿಕ್ಕಿದೆ. ಜೆಡಿಎಸ್​ ಕಾರ್ಯಕರ್ತರ ಜೊತೆ ಜೆಪಿ ಭವನದಲ್ಲಿ ಗೌಡರು ಸಭೆ ನಡೆಸಿದ್ರು. ಸಭೆಯಲ್ಲಿ ಶಾಸಕ ಗೋಪಾಲಯ್ಯ ಸೇರಿದಂತೆ ಹಲವರು ಭಾಗಿಯಾಗಿದ್ದರು.

RELATED ARTICLES

Related Articles

TRENDING ARTICLES