Monday, October 7, 2024

‘ಲೋಕ’ ಸಮರಕ್ಕೆ ಡೇಟ್​ ಫಿಕ್ಸ್ – ರಾಜ್ಯದಲ್ಲಿ 2 ಹಂತಗಳಲ್ಲಿ ಎಲೆಕ್ಷನ್…

ನವದೆಹಲಿ : ಲೋಕಸಭಾ ಚುನಾವಣೆಗೆ ಡೇಟ್​ ಫಿಕ್ಸ್ ಆಗಿದೆ. ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥ ಸುನೀಲ್ ಅರೋರ ಅವರು  ಚುನಾವಣಾ ದಿನಾಂಕವನ್ನು ಘೋಷಿಸಿದ್ದಾರೆ. ದೇಶದಲ್ಲಿ 7 ಹಂತಗಳಲ್ಲಿ, ರಾಜ್ಯದಲ್ಲಿ 7 ಹಂತಗಳಲ್ಲಿ ಎಲೆಕ್ಷನ್ ನಡೆಯಲಿದೆ. ಏಪ್ರಿಲ್​ 11ರಂದು ಮೊದಲ ಹಂತ, ಏಪ್ರಿಲ್​​ 18ಕ್ಕೆ ಎರಡನೇ, ಏಪ್ರಿಲ್​ 23ಕ್ಕೆ 3ನೇ, ಏಪ್ರಿಲ್​ 29ಕ್ಕೆ 4ನೇ, ಮೇ 6ಕ್ಕೆ 5ನೇ. ಮೇ 12ಕ್ಕೆ 6ನೇ, ಮೇ ಮೇ 19ಕ್ಕೆ 7ನೇ ಹಂತದ ಚುನಾವಣೆ ನಡೆಯಲಿದೆ. ಮೇ 23ಕ್ಕೆ ಚುನಾವಣಾ ಫಲಿತಾಂಶ ಹೊರ ಬೀಳಲಿದೆ.
ರಾಜ್ಯದ ಒಟ್ಟು 28 ಲೋಕಸಭಾ ಕ್ಷೇತ್ರಗಳಲ್ಲಿ 14 ಕ್ಷೇತ್ರಗಳಿಗೆ ಏಪ್ರಿಲ್​ 18ರಂದು ಹಾಗೂ ಇನ್ನುಳಿದ 14 ಲೋಕಸಭಾ ಕ್ಷೇತ್ರಗಳಲ್ಲಿ ಏಪ್ರಿಲ್ 23ರಂದು ಮತದಾನ ನಡೆಯಲಿದೆ.

ದೇಶಾದ್ಯಂತ 7 ಹಂತಗಳಲ್ಲಿ ಲೋಕಸಭಾ ಚುನಾವಣೆಯ ಕಂಪ್ಲೀಟ್​ ಡಿಟೇಲ್ಸ್
ದೇಶದ 543 ಲೋಕಸಭಾ ಸ್ಥಾನಗಳಿಗೆ 7 ಹಂತಗಳಲ್ಲಿ ಮತದಾನ
1ನೇ ಹಂತ – ಏಪ್ರಿಲ್​ 11 – 20 ರಾಜ್ಯಗಳ 91 ಕ್ಷೇತ್ರಗಳಲ್ಲಿ ಮತದಾನ
2ನೇ ಹಂತ – ಏಪ್ರಿಲ್​ 18 – 13 ರಾಜ್ಯಗಳ 97 ಕ್ಷೇತ್ರಗಳಲ್ಲಿ ಮತದಾನ
3ನೇ ಹಂತ – ಏಪ್ರಿಲ್ 23 – 14 ರಾಜ್ಯಗಳ 115 ಕ್ಷೇತ್ರಗಳಲ್ಲಿ ಮತದಾನ
4ನೇ ಹಂತ – ಏಪ್ರಿಲ್​ 29 – 9 ರಾಜ್ಯಗಳ 71 ಕ್ಷೇತ್ರಗಳಲ್ಲಿ ಮತದಾನ
5ನೇ ಹಂತ – ಮೇ 6 – 7 ರಾಜ್ಯಗಳ 51 ಕ್ಷೇತ್ರಗಳಲ್ಲಿ ಮತದಾನ
6ನೇ ಹಂತ – ಮೇ 12  – 7 ರಾಜ್ಯಗಳ 59 ಕ್ಷೇತ್ರಗಳಲ್ಲಿ ಮತದಾನ
7ನೇ ಹಂತ – ಮೇ 19  – 8 ರಾಜ್ಯಗಳ 59 ಕ್ಷೇತ್ರಗಳಲ್ಲಿ ಮತದಾನ
ಲೋಕಸಭೆಯ ಚುನಾವಣೆ ಫಲಿತಾಂಶ ಮೇ 23 ರಂದು ಪ್ರಕಟ

ಕರ್ನಾಟಕದಲ್ಲಿ 2 ಹಂತಗಳಲ್ಲಿ ಎಲೆಕ್ಷನ್ – ಇಲ್ಲಿದೆ ಪಕ್ರಿಯೆಯ ಕಂಪ್ಲೀಟ್​ ಡಿಟೇಲ್ಸ್..!

 

RELATED ARTICLES

Related Articles

TRENDING ARTICLES