ಭಟ್ಕಳ : ‘ರಾಹುಲ್ ಗಾಂಧಿ ಬ್ರಾಹ್ಮಣ ಹೇಗಾದ ಅನ್ನೋದಕ್ಕೆ ಸಾಕ್ಷ್ಯ ಕೊಡ್ತಾರಾ’? ಎಂದು ಕೇಂದ್ರ ಸಚಿವ ಅನಂತ್ಕುಮಾರ್ ಹೆಗಡೆ ಮತ್ತೊಂಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಉತ್ತರ ಕನ್ನಡದ ಭಟ್ಕಳದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅನಂತ್ಕುಮಾರ್ ಹೆಗಡೆಯವರು, ‘ಉಗ್ರರನ್ನ ಹೊಡೆದುರುಳಿಸಿದ್ದಕ್ಕೆ ಸಾಕ್ಷಿ ಕೇಳ್ತಾರೆ. ವೈಮಾನಿಕ ದಾಳಿಯ ಕುರಿತು ಇವರಿಗೆ ಸಾಕ್ಷ್ಯ ಬೇಕು. ಮುಸಲ್ಮಾನನ ಮಗ ಬ್ರಾಹ್ಮಣ ಹೇಗಾದ? ಗಾಂಧಿ ಹೇಗಾದ? ಮುಸಲ್ಮಾನ ತಂದೆ, ಕ್ರಿಶ್ಚಿಯನ್ ತಾಯಿಗೆ ಹುಟ್ಟಿದ ಮಗ ಬ್ರಾಹ್ಮಣ ಹೇಗಾದ ಅನ್ನೋದಕ್ಕೆ ಸಾಕ್ಷ್ಯ ಕೊಡ್ತಾರಾ?’ ಎಂದಿದ್ದಾರೆ.
‘ಬಾಂಬ್ ಸ್ಫೋಟದಲ್ಲಿ ರಾಜೀವ್ ಗಾಂಧಿ ದೇಹ ಛಿದ್ರ ಛಿದ್ರವಾಗಿತ್ತು? ಆಗ ಡಿಎನ್ಎ ಟೆಸ್ಟ್ ಮಾಡಬೇಕಾದಾಗ ಸೋನಿಯಾ ಗಾಂಧಿ ರಾಹುಲ್ ಗಾಂಧಿ ರಕ್ತ ಬೇಡ, ಪ್ರಿಯಾಂಕ ಗಾಂಧಿ ರಕ್ತ ತಗೋಳಿ ಅಂದಿದ್ದರು’ ಎಂದು ಅನಂತ್ಕುಮಾರ್ ಹೆಗಡೆ ಅವರು ಮತ್ತೊಮ್ಮೆ ನಾಲಿಗೆ ಹರಿಬಿಟ್ಟಿದ್ದಾರೆ.
‘ರಾಹುಲ್ ಗಾಂಧಿ ಬ್ರಾಹ್ಮಣ ಹೇಗಾದ ಅನ್ನೋದಕ್ಕೆ ಸಾಕ್ಷ್ಯ ಕೊಡ್ತಾರಾ’? : ಅನಂತ್ಕುಮಾರ್ ಹೆಗಡೆ
TRENDING ARTICLES