Sunday, December 22, 2024

ಆರ್ಮಿ ಕ್ಯಾಪ್​ನಲ್ಲಿ ಕಣಕ್ಕಿಳಿದ ಟೀಮ್​ ಇಂಡಿಯಾ..!

ರಾಂಚಿ: ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ 3ನೇ ಏಕದಿನ ಪಂದ್ಯ ಸೋಲು-ಗೆಲುವಿನ ಹೊರತಾಗಿಯೂ ವಿಶೇಷ ಮಹತ್ವವನ್ನು ಪಡೆದುಕೊಂಡಿದೆ. ರಾಂಚಿಯಲ್ಲಿ ನಡೆಯುವ ಇಂದಿನ ಪಂದ್ಯದಲ್ಲಿ ಜಮ್ಮು ಕಾಶ್ಮಿರದ ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಗೌರವ ಸಲ್ಲಿಸುವ ಸಲುವಾಗಿ ವಿಶೇಷವಾಗಿ ಸಿದ್ಧಪಡಿಸಿದ ಆರ್ಮಿ ಕ್ಯಾಪ್‌‌ನೊಂದಿಗೆ ಟೀಮ್​ಇಂಡಿಯಾ ಕಣಕ್ಕಿಳಿದಿದೆ.

ಟೀಮ್​ಇಂಡಿಯಾ ಆಟಗಾರರು ಇಂದಿನ ಪಂದ್ಯದ ಸಂಭಾವನೆಯನ್ನೂ ಇಂಡಿಯನ್​ ಡಿಫೆನ್ಸ್​​ ಫಂಡ್​ಗೆ ದೇಣಿಗೆಯಾಗಿ ನೀಡುವ ಮಹತ್ವದ ತಿರ್ಮಾನ ಕೈಗೊಂಡಿದ್ದಾರೆ. ಪಂದ್ಯಕ್ಕೂ ಮೊದಲು ಭಾರತೀಯ ಸೇನೆಯಲ್ಲಿ ಲೆಫ್ಟಿನಂಟ್ ಕರ್ನಲ್ ಗೌರವಾರ್ಥ ಹುದ್ದೆಯನ್ನು ಹೊಂದಿರುವ ಎಮ್​ಎಸ್​ ಧೋನಿ ಆಟಗಾರರಿಗೆ ಬಿಸಿಸಿಐ ಸಿದ್ಧಪಡಿಸಿದ ವಿಶೇಷ ಆರ್ಮಿ ಕ್ಯಾಪ್ ಹಂಚಿದರು.

ಈಗಾಗಲೇ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿರುವ ಟೀಮ್​ಇಂಡಿಯಾ ಈ ಪಂದ್ಯದಲ್ಲಿ ಗೆದ್ದು ಸರಣಿ ವಶಪಡಿಸಿಕೊಳ್ಳುವ ಹಂಬಲದಲ್ಲಿದೆ. ಇನ್ನು ಪಂದ್ಯದಲ್ಲಿ ಟಾಸ್​​ ಗೆದ್ದಿರುವ ಟೀಮ್​ಇಂಡಿಯಾ ಬೌಲಿಂಗ್​ ಆಯ್ದುಕೊಂಡಿದೆ.

RELATED ARTICLES

Related Articles

TRENDING ARTICLES