Monday, December 23, 2024

ಗೋ ಬ್ಯಾಕ್​ ನಿಖಿಲ್ ಕ್ಯಾಂಪೇನ್​ ಬಗ್ಗೆ ಸಿಎಂ ಹೇಳಿದ್ದೇನು?

ಚಿಕ್ಕಮಗಳೂರು : ಮಂಡ್ಯ ರಣಕಣ ಕಾವೇರುತ್ತಿದೆ. ಕೆಲವರು ನಿಖಿಲ್ ಕುಮಾರಸ್ವಾಮಿ ಅವರ ಸ್ಪರ್ಧೆಯನ್ನು ವಿರೋಧಿಸುತ್ತಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ‘ಗೋ ಬ್ಯಾಕ್​ ನಿಖಿಲ್​ ಕುಮಾರಸ್ವಾಮಿ- ವಿ ಸಪೋರ್ಟ್​ ಸುಮಲತಾ’ ಎನ್ನುವ ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಈ ಬಗ್ಗೆ ಚಿಕ್ಕಮಗಳೂರಿನಲ್ಲಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ‘ನಿಖಿಲ್​ ಬರ್ಬೇಕು ಅನ್ನೋರು ಇರ್ತಾರೆ. ಹೋಗ್ಬೇಕು ಅನ್ನೋರು ಇರ್ತಾರೆ. ಸೋಶಿಯಲ್​ ಮೀಡಿಯಾದಲ್ಲಿ ಅಪಪ್ರಚಾರ ಮಾಡುವ ವಿಂಗ್ ಇದೆ. ನಿಜವಾದ ಪ್ರೀತಿ-ವಿಶ್ವಾಸ ಇಟ್ಟವರು ಓಟು ಮಾಡುತ್ತಾರೆ’ ಅಂತ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

RELATED ARTICLES

Related Articles

TRENDING ARTICLES