Monday, December 23, 2024

ಶಿವಮೊಗ್ಗವನ್ನು ಯಡಿಯೂರಪ್ಪ ಮತ್ತು ಅವರ ಮಕ್ಕಳಿಗೆ ಬರೆದುಕೊಟ್ಟಿದ್ದಾರಾ..? : ಹೆಚ್.ಡಿ ರೇವಣ್ಣ

ಹಾಸನ : ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರನ್ನು ಟೀಕಿಸಿದ ಬಿಜೆಪಿ ಮುಖಂಡರ ವಿರುದ್ಧ ಸಚಿವ ಹೆಚ್.ಡಿ ರೇವಣ್ಣ ಫುಲ್ ಗರಂ ಆಗಿದ್ದಾರೆ.
ಹೊಳೆನರಸೀಪುರ ತಾಲೂಕು ಕಳ್ಳಿಕೊಪ್ಪಲು ಗ್ರಾಮದಲ್ಲಿ ಮಾತನಾಡಿದ ಅವರು, ‘ಕರ್ನಾಟಕ ದೇವೇಗೌಡರ ಅಪ್ಪನ ಮನೆ ಆಸ್ತೀನಾ’ ಎಂದು ಹೇಳಿಕೆ ನೀಡಿದ್ದ ಶಾಸಕ ಪ್ರೀತಂ ಗೌಡ ಅವರ ವಿರುದ್ಧ ವಾಗ್ದಾಳಿ ನಡೆಸಿದರು. ಹಾಗೇ ಮಾತನಾಡುವವರಿಗೆ ನಾಚಿಕೆ ಮಾನ-ಮರ್ಯಾದೆ ಇಲ್ಲ. ಹಾಗಾದ್ರೆ ಶಿವಮೊಗ್ಗವನ್ನು ಯಡಿಯೂರಪ್ಪ ಹಾಗೂ ಅವರ ಮಕ್ಕಳಿಗೆ ಬರೆದುಕೊಟ್ಟಿದ್ದಾರಾ’ ಅಂತ ಪ್ರಶ್ನಿಸಿದ್ದಾರೆ.
‘ದೇವೇಗೌಡರು, ಕುಮಾರಸ್ವಾಮಿ ಏನು ಮಾಡಿದ್ದಾರೆ’ ಎನ್ನುವ ಯಡಿಯೂರಪ್ಪ ಅವರ ಪ್ರಶ್ನೆಗೆ, ‘ಬಿಜೆಪಿಯವರು ರಾಜ್ಯದ ಜನ ನಮಗೆ ಬಾಂಡೆಡ್ ಲೇಬರ್ ಎಂದುಕೊಂಡಿದ್ದಾರೆ .ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ತಕ್ಕಪಾಠ ಕಲಿಸುತ್ತಾರೆ. ಇವರು 18 ಜನ ಎಂಪಿ ಇಟ್ಟುಕೊಂಡು ಯಾವ ಹೋರಾಟ ಮಾಡಿದ್ದಾರೆ? ಎಂದು ಕಿಡಿಕಾರಿದರು.
ಇನ್ನು ಶ್ರೀನಿವಾಸ್​ ಪ್ರಸಾದ್ ಅವರ ವಿರುದ್ಧ ವಾಗ್ದಾಳಿ ನಡೆಸಿದ ರೇವಣ್ಣ, ದೇವೇಗೌಡರ ವಿರುದ್ಧ ಮಾತನಾಡಲು ಶ್ರೀನಿವಾಸ್​ ಪ್ರಸಾದ್​ಗೆ ನಾಚಿಕೆ ಆಗಬೇಕು ಎಂದರು.

RELATED ARTICLES

Related Articles

TRENDING ARTICLES