Monday, December 23, 2024

ಕುಮಾರಸ್ವಾಮಿ ಎಳೆತನ ಬಿಡಬೇಕು : ಬಿಎಸ್​ವೈ

ಹುಬ್ಬಳ್ಳಿ : ಮಾಜಿ ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ‘ಜನರಿಗೆ ಮೋಸಮಾಡಿ ಕುಮಾರಸ್ವಾಮಿ 37 ಸೀಟು ಗೆದ್ದಿದ್ದಾರೆ. ಅವರು ಅಧಿಕಾರಕ್ಕೆ ಬಂದು 9 ತಿಂಗಳಾಯ್ತು. ಕೇವಲ ನಾಲ್ಕುವರೆ ಸಾವಿರ ಕೋಟಿ ಸಾಲಮನ್ನಾ ಮಾತ್ರ ಮಾಡಿದ್ದಾರೆ. ಅಪ್ಪ-ಮಕ್ಕಳು ಸುಳ್ಳು ಹೇಳಿ ಜನರನ್ನು ವಂಚಿಸುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಜನರು ಜಾಗೃತರಾಗಬೇಕು. ಭೀಕರ ಬರಗಾಲಕ್ಕೆ ರಾಜ್ಯ ಸರ್ಕಾರ ಸ್ಪಂದಿಸುತ್ತಿಲ್ಲ. ಕುಮಾರಸ್ವಾಮಿ ತಮ್ಮ ಎಳೆತನವನ್ನು ಬಿಡಬೇಕು’ ಎಂದು ಟೀಕಾ ಪ್ರಹಾರ ನಡೆಸಿದರು. 

RELATED ARTICLES

Related Articles

TRENDING ARTICLES