Sunday, December 22, 2024

‘ನಂಗೆ 4, ನಿಂಗೆ 6 ಎನ್ನುವವರು ದೇಶವನ್ನು ಹಂಚಿಕೊಳ್ತಾರೆ : ಮೈತ್ರಿಗೆ ಮೋದಿ ಟಾಂಗ್..!

ಕಲಬುರಗಿ : ಪ್ರಧಾನಿ ನರೇಂದ್ರ ಮೋದಿ ಕಲಬುರಗಿಯಲ್ಲಿ ‘ಲೋಕ’ ಸಮರದ ರಣಕಹಳೆ ಮೊಳಗಿಸಿದ್ದಾರೆ. ಬಿಜಿಪಿ ಮಹಾ ಸಮಾವೇಶದಲ್ಲಿ ಮಾತನಾಡಿದ ಮೋದಿ ಎಂದಿನಂತೆ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ರಾಜ್ಯದಲ್ಲಿ ಮೈತ್ರಿ ಸರ್ಕಾರವನ್ನು ಕಟುವಾಗಿ ಟೀಕಿಸಿದ ಅವರು, ‘ಮೈತ್ರಿಯಲ್ಲಿ ನಂಗೆ ನಾಲ್ಕು, ನಿಂಗೆ 6 ಎಂದು ಹಂಚಿಕೊಳ್ತಾ ಇದ್ದಾರೆ. ಇವರು ಹೀಗೆ ದೇಶವನ್ನು ಹಂಚಿಕೊಂಡು ಲೂಟಿ ಹೊಡೆಯುತ್ತಾರೆ. ನಿಮಗೆ ಬಹುಮತವುಳ್ಳ ಸುಭದ್ರ ಸರ್ಕಾರ ಬೇಕೋ ಅಥವಾ ದೇಶವನ್ನು ಹಂಚಿಕೊಳ್ಳುವ ಮೈತ್ರಿ ಬೇಕೋ ಯೋಚಿಸಿ’ ಎಂದರು.
ರಾಜ್ಯದಲ್ಲಿರೋದು ರೈತ ವಿರೋಧಿ ಸರ್ಕಾರ. ಬೆಂಗಳೂರಲ್ಲಿ ಕುಳಿತಿರುವ ಸರ್ಕಾರ ರೈತರ ಸಾಲ ಮನ್ನಾ ಮಾಡಿಲ್ಲ. ರೈತರಿಗೆ ಮೋಸ ಎಸಗುತ್ತಿದೆ. ಇಲ್ಲಿನ ಸಿಎಂ ರಿಮೋಟ್​ ಬೇರೊಬ್ಬರ ಕೈಯಲ್ಲಿದೆ. ಅವರು ಹೇಳಿದಂತೆ ಸಿಎಂ ಕೇಳಬೇಕು’ ಎಂದು ಟೀಕಿಸಿದರು.

RELATED ARTICLES

Related Articles

TRENDING ARTICLES