Wednesday, May 22, 2024

ಮೋದಿಯವರ ಭಾಷಣ ಕೇಳಲು ಮಾತ್ರ ಆಕರ್ಷಕ : ಸಿಎಂ

ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣ ಕೇಳಲು ಮಾತ್ರ ಆಕರ್ಷಕ ಎಂದು ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಟೀಕಿಸಿದರು.
ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಮೋದಿಯವರ ಭಾಷಣ ಕೇಳಲು ಮಾತ್ರ ಆಕರ್ಷಕವಾಗಿರುತ್ತದೆ. ಆದ್ರೆ, ವಾಸ್ತವದಲ್ಲಿ ಜಾರಿಗೆ ತರುವ ಯೋಜನೆಗಳು ಇರುವುದಿಲ್ಲ’ ಎಂದರು. 
ಕಲಬುರಗಿಯಲ್ಲಿ ಮಾತನಾಡಿದ ಮೋದಿ ಅವರು, ‘ರಾಜ್ಯದಲ್ಲಿರೋದು ರೈತ ವಿರೋಧಿ ಸರ್ಕಾರ. ಕುಮಾರಸ್ವಾಮಿ ಅವರು ‘ರಿಮೋಟ್​ ಕಂಟ್ರೋಲ್​ ಸಿಎಂ’ ಎಂದು ಟೀಕಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ‘ಮೋದಿ ರೈತರ ಅಕೌಂಟ್​ಗೆ 2000ರೂ ಹಾಕುತ್ತೇವೆ ಎಂದಿದ್ದಾರೆ. ಆದ್ರೆ ವಾಸ್ತವವಾಗಿ ನರೇಗಾ ಯೋಜನೆಯ ಹಣವನ್ನೇ ವರ್ಗಾವಣೆ ಮಾಡಿದ್ದಾರೆ. ನರೇಗಾ ಯೋಜನೆಯ 24,000 ಕೋಟಿ ರೂ.ಕೂಲಿ ಹಣ ಕಡಿತ ಮಾಡಿದ್ದಾರೆ. ಅದನ್ನೇ ರೈತರ ಅಕೌಂಟ್​ಗೆ ವರ್ಗಾವಣೆ ಮಾಡಿದ್ದಾರೆ.ಇದು ನಮ್ಮ ಗ್ರಾಮೀಣ ಜನರಿಗೆ ಅರ್ಥವಾಗುವುದಿಲ್ಲ’ ಎಂದು ವಾಗ್ದಾಳಿ ನಡೆಸಿದ್ರು.

RELATED ARTICLES

Related Articles

TRENDING ARTICLES