Thursday, May 30, 2024

ಮಂಡ್ಯದಲ್ಲಿ ನಿಖಿಲ್​ ಕುಮಾರಸ್ವಾಮಿ ಸ್ಪರ್ಧೆಗೆ ವಿರೋಧ..!

ಮಂಡ್ಯ : ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದು, ಮಂಡ್ಯ ಲೋಕಸಭಾ ಕಣ ಸ್ಟಾರ್ ವಾರ್​ಗೆ ಸಾಕ್ಷಿಯಾಗುತ್ತಿದೆ. ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಈಗಾಗಲೇ ಮಂಡ್ಯ ಕ್ಷೇತ್ರ ಎಲ್ಲರ ಚಿತ್ತವವನ್ನು ತನ್ನತ್ತ ಸೆಳೆದಿದೆ.
ಮೈತ್ರಿ ಅಭ್ಯರ್ಥಿಯಾಗಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್​ ಕುಮಾರಸ್ವಾಮಿ ಕಣಕ್ಕಿಳಿಯುವುದು ಪಕ್ಕಾ ಆಗಿದೆ. ಜೊತೆಗೆ ಮೈತ್ರಿ ಟಿಕೆಟ್​ ಸಿಗದೇ ಇದ್ರೂ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸಿದ್ಧರಾಗಿದ್ದಾರೆ ಸುಮಲತಾ ಅಂಬರೀಶ್.
ಹೀಗೆ ಮಂಡ್ಯ ಚುನಾವಣಾ ಕಣ ಈಗಾಗಲೇ ರಂಗೇರಿದೆ. ಹೀಗಿರುವಾಗ ನಿಖಿಲ್ ಕುಮಾರಸ್ವಾಮಿ ಅವರ ಸ್ಪರ್ಧೆಗೆ ವಿರೋಧ ವ್ಯಕ್ತವಾಗಿದೆ. ಮಂಡ್ಯದಲ್ಲಿ ನಿಖಿಲ್​ ಕುಮಾರಸ್ವಾಮಿ ಸ್ಪರ್ಧೆ ವಿರೋಧಿಸಿ ರೆಬಲ್​ ಸ್ಟಾರ್ ಅಂಬರೀಶ್​ ಅವರ ಅಭಿಮಾನಿಯೊಬ್ಬರು ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಅವರಿಗೆ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.
‘ನಿಖಿಲ್​ ಬಿಟ್ಟು ಮತ್ಯಾವ ಆಕಾಂಕ್ಷಿಯೂ ಇರಲಿಲ್ಲವೇ..? ಜೆಡಿಎಸ್​ ಮುಖಂಡರಾದ ದಿ. ತೊಪ್ಪನಹಳ್ಳಿ ಪ್ರಕಾಶ್ ಅವರ ಪತ್ನಿಗೆ ಟಿಕೆಟ್ ಕೊಡಬಹುದಿತ್ತು. ಅಶೋಕ್​ ಜಯರಾಮ್​ ಸೇರಿ ಹಲವರು ಟಿಕೆಟ್​ ಆಕಾಂಕ್ಷಿಗಳಿದ್ದಾರೆ’ ಎಂದು ಹೇಳಿರುವ ಅಭಿಮಾನಿ, ಸುಮಲತಾ ಅವರ ಕೊಡುಗೆ ಏನು ಎಂದಿರೋ ಸಿಎಂಗೆ, ‘ನಿಮ್ಮ ಪತ್ನಿಯವರ ಕೊಡುಗೆಯಾದ್ರೂ ಏನು’ ಎಂದು ಪ್ರಶ್ನಿಸಿದ್ದಾರೆ.

https://www.facebook.com/powertvnews/videos/839856986360130/?eid=ARB-JLnq5wxbzrfxbkYpNtf-yCr9DQlWUB8WNkT-o1M_d2NVOgIjW6A0GU1e9_6A10Hkquk9-UruCEdN

RELATED ARTICLES

Related Articles

TRENDING ARTICLES