Friday, January 3, 2025

ಕಛ್​ ಸಮೀಪ ಪಾಕ್​ ಡ್ರೋನ್​ ಪತ್ತೆ​..!

ಗಾಂಧೀನಗರ: ಗುಜರಾತ್​ನ ಕಛ್​ನಲ್ಲಿ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನದ ಡ್ರೋನ್​ನ್ನು ಹೊಡೆದುರುಳಿಸಲಾಗಿದೆ. ಕಛ್​ನ ನನ್​​ಘಾಟ್​ ಪ್ರದೇಶದಲ್ಲಿ ಅಪರಿಚಿತ ಡ್ರೋನ್​ನ್ನು ಉರುಳಿಸಲಾಗಿದೆ.  ಇಂದು ಬೆಳಗಿನ ಜಾವ ಗಡಿ ನಿಯಂತ್ರಣ ರೇಖೆಯಲ್ಲಿ ಜೈಷ್​ ಅಡಗುತಾಣಗಳ ಮೇಲೆ ಭಾರತೀಯ ವಾಯು ಪಡೆ ಏರ್​ ಸರ್ಜಿಕಲ್ ಸ್ಟ್ರೈಕ್​ ನಡೆದ ಬೆನ್ನಲ್ಲೇ ಡ್ರೋನ್ ಕಾಣಿಸಿಕೊಂಡಿದೆ.

ಗ್ರಾಮಸ್ಥರಿಗೆ ದೊಡ್ಡ ಶಬ್ದ ಕೇಳಿಬಂದಿದ್ದ ಹಿನ್ನೆಲೆ ಪರಿಶೀಲನೆ ನಡೆಸಿದಾಗ ಡ್ರೋನ್ ಇರುವುದು ತಿಳಿದುಬಂದಿದೆ. ಅಪರಿಚಿತ ಡ್ರೋನ್​ ಪತ್ತೆಯಾಗಿರುವ ಬಗ್ಗೆ ತನಿಖೆ ನಡೆಸಲಾಗುತ್ತದೆ ಅಂತ ಪೊಲೀಸರು ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES