Friday, April 12, 2024

ಧೋನಿಗೆ ಪಂತ್, ಕೊಹ್ಲಿಗೆ ಬುಮ್ರಾ ಖಡಕ್ ವಾರ್ನಿಂಗ್..!

ಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಅವರಿಗೆ ಯುವ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ರಿಷಬ್ ಪಂತ್, ಕ್ಯಾಪ್ಟನ್ ವಿರಾಟ್​ ಕೊಹ್ಲಿ ಅವರಿಗೆ ವೇಗಿ ಜಸ್ಪ್ರಿತ್​ ಬುಮ್ರಾ ವಾರ್ನಿಂಗ್ ನೀಡಿದ್ದಾರೆ.
ಅರೆ, ಮಾಜಿ-ಹಾಲಿ ಕ್ಯಾಪ್ಟನ್​ಗಳಿಗೆ ಯಂಗ್ ಪ್ಲೇಯರ್ಸ್ ಎಚ್ಚರಿಕೆ ನೀಡಿದ್ದಾ..? ಹೌದು ಇದು ಇಂಟರ್ ನ್ಯಾಷನಲ್ ಕ್ರಿಕೆಟ್ ವಿಷಯವೂ ಅಲ್ಲ ಹಾಗೂ ಸಿಟ್ಟಿನಿಂದ ಮಾಡಿದ ವಾರ್ನಿಂಗ್ ಕೂಡ ಅಲ್ಲ..! ಐಪಿಎಲ್​​ ಜಾಹಿರಾತಿನ ವಿಷ್ಯ.
ಐಪಿಎಲ್​ ಜಾಹಿರಾತಿಗೆ ಸಂಬಂಧಿಸಿದ ಒಂದು ವಿಡಿಯೋದಲ್ಲಿ, ‘ಮಾಹಿ ಭಾಯ್ ನಂಗೆ ಗುರು. ಅವ್ರು ಇಲ್ದೇ ಇದ್ರೆ ನಾನು ವಿಕೆಟ್​ ಕೀಪರ್​, ಬ್ಯಾಟ್ಸ್​​ಮನ್ ಆಗ್ತಿದ್ನೋ, ಇಲ್ವೋ? ಆದ್ರೆ, ಈ ಬಾರಿ ಅವರ ಟೀಮ್​ನ ವಿರುದ್ಧ ನಾನು ಆಡುವ ಆಟಕ್ಕೆ ಕ್ಯಾಪ್ಟನ್​ ಕೂಲ್​, ಕೂಲಾಗಿರಲ್ಲ. ಮಾಹಿ ಭಾಯ್ ರೆಡಿಯಾಗಿದ್ದೀರಾ ಅಂತ ಕೇಳಿದ್ದಾರೆ.
ಇನ್ನೊಂದು ವಿಡಿಯೋದಲ್ಲಿ ಬುಮ್ರಾ, ‘ನಾನು ವಿಶ್ವದ ಬೆಸ್ಟ್​ ಬೌಲರ್ ಅಲ್ಲ. ವಿಶ್ವದ ಬೆಸ್ಟ್​​ ಬ್ಯಾಟ್ಸ್​ಮನ್ ವಿಕೆಟ್ ತೆಗೆಯೋದು ಬಾಕಿ ಇದೆ. ಈ ಸಲ ನೀವು ನನ್ ಟೀಮ್​ನಲ್ಲಿ ಇರಲ್ಲ, ನೆನಪಿರಲಿ ಚೀಕು ಭಯ್ಯ, ಬರ್ತಿದ್ದೇನೆ’ ಅಂದಿದ್ದಾರೆ.

RELATED ARTICLES

Related Articles

TRENDING ARTICLES