Wednesday, May 22, 2024

‘ಮೋದಿಯನ್ನು ಎದುರಿಸುವ ಶಕ್ತಿ ರಾಹುಲ್​​​​​ಗಿಲ್ಲ, ಆ ತಾಕತ್ತು ಇರೋದು ಖರ್ಗೆಗೆ’..!

ದಾವಣಗೆರೆ : ಪ್ರಧಾನಿ ನರೇಂದ್ರ ಮೋದಿ ಅವರನ್ನು ಎದುರಿಸುವ ಶಕ್ತಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗಿಲ್ಲ. ಆ ತಾಕತ್ತು ಮಲ್ಲಿಕಾರ್ಜುನ ಖರ್ಗೆ ಅವರಿಗಿದೆ ಅಂತ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಹೇಳಿದ್ರು.
ದಾವಣಗೆರೆಯಲ್ಲಿ ಜಿಲ್ಲಾ ಛಲವಾದಿ ಮಹಾಸಭಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ರಾಹುಲ್​ ಗಾಂಧಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಎದುರಿಸುವ ಶಕ್ತಿಯಿಲ್ಲ. ಸಂಸದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಆ ತಾಕತ್ತು ಇದೆ. ಖರ್ಗೆ ಅವರಿಗೆ ಪ್ರಧಾನಿಯಾಗುವ ಅರ್ಹತೆ ಇದೆ’ ಎಂದರು.
ಇನ್ನು ಇದಕ್ಕು ಮುನ್ನ ಡಿಸಿಎಂ ಡಾ.ಜಿ ಪರಮೇಶ್ವರ್ ಅವರು ಕೂಡ ಮಲ್ಲಿಕಾರ್ಜುನ ಖರ್ಗೆ ಪರ ಬ್ಯಾಟಿಂಗ್ ಮಾಡಿದ್ದರು. ‘ನಾನು ಸಿಎಂ ಆಗುವುದನ್ನು 3 ಬಾರಿ ತಪ್ಪಿಸಲಾಗಿದೆ. ಖರ್ಗೆ ಅವರೂ ಮುಖ್ಯಂತ್ರಿಯಾಗುವುದನ್ನು ತಪ್ಪಿಸಲಾಗಿತ್ತು’ ಅಂತ ಸ್ವ ಪಕ್ಷದವರ ವಿರುದ್ಧ ಪರಂ ಪರೋಕ್ಷವಾಗಿ ಆಕ್ರೋಶ ಹೊರಹಾಕಿದ್ದರು.

RELATED ARTICLES

Related Articles

TRENDING ARTICLES