ರೆಬಲ್ಸ್ಟಾರ್ ಅಂಬರೀಶ್ ಅವರ ಪತ್ನಿ ಸುಮಲತಾ ರಾಜಕೀಯ ಪ್ರವೇಶ ಬಹುತೇಕ ಖಚಿತವಾಗಿದೆ. ಅದ್ರಲ್ಲೂ ಸಾಮಾಜಿಕ ಕಾರ್ಯಗಳ ಮೂಲಕ ರಾಜಕೀಯ ಪ್ರವೇಶ ಮಾಡೋ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದಾರೆ. ಈಗಾಗ್ಲೇ ಹುತಾತ್ಮ ಯೋಧ ಗುರು ಕುಟುಂಬಕ್ಕೆ 20ಗುಂಟೆ ಜಮೀನು ನೀಡೋ ಭರವಸೆ ಮೂಲಕ ಸಾಮಾಜಿಕ ಕಳಕಳಿ ಮೆರೆಯಲು ಮುಂದಾಗಿದ್ದಾರೆ. ಮತ್ತೊಂದೆಡೆ ನಾಡಿನ ದೊರೆ ಸಿಎಂ ಕುಮಾರಸ್ವಾಮಿ 5 ಸಾವಿರ ಕೋಟಿಗೂ ಹೆಚ್ಚು ರೂಪಾಯಿಯನ್ನು ಜಿಲ್ಲೆಯ ಅಭಿವೃದ್ಧಿಗೆ ನೀಡೋ ಮೂಲಕ ತಮ್ಮ ಮಗ ನಿಖಿಲ್ ಗೆಲುವಿಗೆ ಪಣತೊಟ್ಟಿದ್ದಾರೆ.
ಹೌದು, ಸಕ್ಕರೆ ನಾಡಿನ ಜನರ ಮನದಾಳ ಹೇಗೆ ಅಂತ ಹೇಗೆ ಹೇಳೋಕಾಗುತ್ತೆ.. ಇಡೀ ರಾಜ್ಯವೇ ಒಂದು ತರ ಯೋಚನೆ ಮಾಡಿದ್ರೆ ಮಂಡ್ಯ ಜನ ಯೋಚನೆ ಮಾಡೋದೆ ವಿಭಿನ್ನ. ಹೀಗಿರುವಾಗ ಸಕ್ಕರೆ ನಾಡಲ್ಲಿ ಮತ್ತೆ ಲೋಕಸಭಾ ಚುನಾವಣೆಯಲ್ಲಿ ಸ್ಟಾರ್ ವಾರ್ ನಡೆಯೋದು ಖಾತ್ರಿಯಾಗ್ತಿದೆ. ಹಿಂದೆ ಮಂಡ್ಯದಿಂದ ರೆಬೆಲ್ ಸ್ಟಾರ್ ಅಂಬರೀಶ್, ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ತಮ್ಮ ಸ್ಟಾರ್ ಗಿರಿಯಿಂದ ಗೆದ್ದು ರಾಜಕಾರಣ ಮಾಡಿದ್ರು. ಇದೀಗ ಮತ್ತೆ ಸ್ಟಾರ್ ವಾರ್ ಗೆ ಮಂಡ್ಯ ಲೋಕಸಭಾ ಅಖಾಡ ಸಿದ್ದಗೊಳ್ತಿದೆ.
ಅದ್ರಲ್ಲೂ ಈ ಬಾರಿ ಅಂಬಿ ಕುಟುಂಬ ಹಾಗೂ ಸಿಎಂ ಫ್ಯಾಮಿಲಿ ನಡುವೆ ಬಿಗ್ ಫೈಟ್ ನಡೆಯೋ ಸಾಧ್ಯತೆ ಇದೆ. ಯಾಕಂದ್ರೆ ಈಗಾಗ್ಲೇ ಸಿಎಂ ಮಂಡ್ಯದಲ್ಲಿ ನಾಲ್ಕು ತಿಂಗಳ ಅವಧಿಯಲ್ಲಿ ಎರಡನೇ ಕೆಡಿಪಿ ಸಭೆ ಮಾಡಿ 5 ಸಾವಿರ ಕೋಟಿ ರೂಪಾಯಿಗಳ ಅಭಿವೃದ್ಧಿ ಕಾಮಗಾರಿಗೆ ಇದೇ ತಿಂಗಳ 27 ರಂದು ಚಾಲನೆ ನೀಡಲಿದ್ದಾರೆ. ಅಲ್ಲದೆ ತಡರಾತ್ರಿವರೆಗೆ ಶಾಸಕರು ಹಾಗೂ ಸಚಿವರ ಸಭೆ ನಡೆಸಿ ತಮ್ಮ ಮಗನ ಗೆಲುವಿಗೆ ಬೇಕಾದ ಸಿದ್ದತೆ ಮಾಡಿಕೊಳ್ಳುವಂತೆ ಖಡಕ್ ಸೂಚನೆ ನೀಡಿದ್ದಾರೆ. ಆದ್ರಿಂದ ಮಂಡ್ಯ ಜಿಲ್ಲೆಯ ಶಾಸಕರು ಜಿಲ್ಲೆಯ ಅಭಿವೃದ್ಧಿ ಕುರಿತು ಸಾಕಷ್ಟು ಶ್ರಮ ವಹಿಸುತ್ತಿದ್ದು, ಐದು ಸಾವಿರ ಕೋಟಿ ಕಾಮಗಾರಿ ಮೂಲಕ ಮಂಡ್ಯ ಜನರನ್ನು ಸೆಳೆಯೋದಕ್ಕೆ ಸಿಎಂ ಮುಂದಾಗಿರೋದು ತಮ್ಮ ಮಗನ ರಾಜಕೀಯ ಪ್ರವೇಶಕ್ಕೆ ಅನ್ನೋ ಮಾತು ಕೇಳಿಬಂದಿದೆ.
ಇನ್ನೂ ಸಿಎಂ ಫ್ಯಾಮಿಲಿಗೆ ಎದುರೇಟು ನೀಡಲೂ ಅಂಬಿ ಕುಟುಂಬ ಕೂಡ ಹಿಂದೆ ಬಿದ್ದಿಲ್ಲ. ಈಗಾಗ್ಲೇ ಅಂಬಿ ನಮನ ಕಾರ್ಯಕ್ರಮ ಮಾಡೋ ಮೂಲಕ ಮಂಡ್ಯದ ಜನರ ಪ್ರೀತಿ, ವಿಶ್ವಾಸ ಗಳಿಸೋಕೆ ಯತ್ನಿಸಿದ್ರು. ಅಲ್ದೆ ಆ ಬಹಿರಂಗ ವೇದಿಕೆಯಲ್ಲಿ ಮಂಡ್ಯ ಜನರು ನನ್ನೊಂದಿಗೆ ಇದ್ರೆ ಸಾಕು ಅಂದಿದ್ರು. ಆ ಸಂದರ್ಭದಲ್ಲಿ ಕನಗನಮರಡಿ ಬಸ್ ದುರಂತದಲ್ಲಿ ಮೃತಪಟ್ಟ ಕುಟುಂಬಗಳಿಗೆ ಪರಿಹಾರ ನೀಡಿದ್ರು. ಅಲ್ಲದೇ ವೀರ ಯೋಧ ಗುಡಿಗೆರೆಯ ಗುರು ಉಗ್ರರ ಅಟ್ಟಹಾಸಕ್ಕೆ ಹುತಾತ್ಮನಾದಾಗ ಮಲೇಶಿಯಾದಿಂದ ಯೋಧನ ಕುಟುಂಬಕ್ಕೆ ಸಾಂತ್ವಾನ ಹೇಳಿ ದೊಡ್ಡರಸಿನಕೆರೆ ಗ್ರಾಮದಲ್ಲಿರೋ ಅಂಬಿ ಹೆಸರಿನ 20 ಗುಂಟೆ ಜಮೀನು ನೀಡೋದಾಗಿ ತಿಳಿಸಿದ್ರು.
ಈ ಮಧ್ಯೆ, ಲೋಕಸಭೆ ಚುನಾವಣೆಗೆ ಸ್ಪರ್ಧೆ ವಿಚಾರವಾಗಿ ಸಿದ್ದರಾಮಯ್ಯ ಜೊತೆ ಚರ್ಚೆ ನಡೆಸಿದ್ರು. ಸಿದ್ಧರಾಮಯ್ಯ ಅವರ ಕಾವೇರಿ ನಿವಾಸದಲ್ಲಿ ಮಾತುಕತೆ ನಡೆಸಿದ್ರು.
ಇದೀಗ ಸುಮಲತಾ ರಾಜಕೀಯ ಎಂಟ್ರಿಗೆ ನಾಳೆಯಿಂದ ಅಖಾಡ ಸಿದ್ದಗೊಳ್ಳಲಿದೆ. ನಾಳೆ ಸುಮಲತಾ ದೊಡ್ಡರಸಿನಕೆರೆ ಗ್ರಾಮಕ್ಕೆ ಆಗಮಿಸಿ ತಮ್ಮ ಮನೆ ದೇವರಾದ ಕಾಲಭೈರವೇಶ್ವರನಿಗೆ ಪೂಜೆ ಸಲ್ಲಿಸಿ ರಾಜಕೀಯ ಪ್ರವೇಶಕ್ಕೆ ಅಡಿ ಇಡಲಿದ್ದಾರೆ. ನಂತರ ಹುತಾತ್ಮ ಯೋಧ ಗುರು ಕುಟುಂಬದವರಿಗೆ ಸಾಂತ್ವಾನ ಹೇಳಿ ತಮ್ಮ ಭರವಸೆಯಂತೆ 20 ಗುಂಟೆ ಜಮೀನನ್ನು ಹುತಾತ್ಮ ಯೋಧನ ಕುಟುಂಬಕ್ಕೆ ನೀಡಲಿದ್ದಾರೆ.
ಮಾಜಿ ಶಾಸಕಿ ದಮಯಂತಿ ಬೋರೇಗೌಡರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿ ನಂತರ ಸುಮಲತಾ ಮಂಡ್ಯದಲ್ಲಿ ತಮ್ಮ ಆಪ್ತರೊಂದಿಗೆ ಗೌಪ್ಯ ಸಭೆ ನಡೆಸೋ ಮೂಲಕ ಸಕ್ಕರೆ ನಾಡಿನ ರಾಜಕಾರಣಕ್ಕೆ ಅಧಿಕೃತ ಎಂಟ್ರಿ ನೀಡೋ ಸಾಧ್ಯತೆ ಇದೆ.
-ಡಿ.ಶಶಿಕುಮಾರ್, ಮಂಡ್