ಬೆಂಗಳೂರು : ವಿಜಯನಗರ ಶಾಸಕ ಆನಂದ್ ಸಿಂಗ್ ಮತ್ತು ಕಂಪ್ಲಿ ಶಾಸಕ ಜೆ.ಎನ್ ಗಣೇಶ್ ಅವರ ಹೊಡೆದಾಟದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.
ಕಂಪ್ಲಿ ಗಣೇಶ್ ಮತ್ತು ಆನಂದ್ ಸಿಂಗ್ ಅವರ ಮನವೊಲಿಕೆಗೆ ಕಾಂಗ್ರೆಸ್ ನಾಯಕರು ಪ್ರಯತ್ನಿಸುತ್ತಿದ್ದಾರೆ. ಹೇಗಾದ್ರು ಮಾಡಿ ಕೇಸ್ ಹಿಂಪಡೆಯುವಂತೆ ಆನಂದ್ ಸಿಂಗ್ ಅವರ ಮನವೊಲಿಸಿ ಅಂತ ಗಣೇಶ್ ಕಾಂಗ್ರೆಸ್ ನಾಯಕರಲ್ಲಿನ ಮನವಿ ಮಾಡಿದ್ದಾರೆನ್ನಲಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಶಾಸಕ ರಮೇಶ್ ಜಾರಕಿಹೊಳಿ ಆನಂದ್ ಸಿಂಗ್ ಅವರ ಮನವೊಲಿಸಿ ಕೇಸ್ ವಾಪಸ್ಸು ಪಡೆಯುವಂತೆ ಮಾಡಲು ಹರಸಾಹಸ ಪಡುತ್ತಿದ್ದಾರೆ ಎಂದು ತಿಳಿದುಬಂದಿದೆ.
ರಮೇಶ್ ಜಾರಕಿಹೊಳಿ ಅವರು ಈ ಬಗ್ಗೆ ಸಿದ್ದರಾಮಯ್ಯ ಅವರಿಗೆ ಕರೆ ಮಾಡಿ ಮಾತನಾಡಿದ್ದಾರೆ ಎನ್ನಲಾಗಿದೆ. ರಾಜಕಾರಣಿಗಳಿಂದ ಮನವೊಲಿಕೆ ಕಷ್ಟ ಅಂತ ಮಾಜಿ ಸಿಎಂ ಸ್ವಾಮೀಜಿ ಮೂಲಕ ಆನಂದ್ ಸಿಂಗ್ ಮನವೊಲಿಕೆಗೆ ಯತ್ನಿಸಬಹುದು ಅಂತ ಸಲಹೆ ನೀಡಿದ್ದಾರೆಂದು ತಿಳಿದುಬಂದಿದೆ. ಆನಂದ್ ಸಿಂಗ್ ಅವರು ಪ್ರಸನ್ನಾನಂದ ಶ್ರೀಗಳ ಮೇಲೆ ವಿಶೇಷ ಗೌರವ ಇಟ್ಟುಕೊಂಡಿದ್ದು, ಅವರ ಮೂಲಕ ಆನಂದ್ ಸಿಂಗ್ ಅವರ ಮನವೊಲಿಸಬಹುದು ಅನ್ನೋದು ಸಿದ್ದರಾಮಯ್ಯ ಅವರ ಪ್ಲಾನ್.
ಹೀಗಾಗಿ ಕಾಂಗ್ರೆಸ್ ನಾಯಕರು ಪ್ರಸನ್ನಾ ನಂದ ಶ್ರೀಗಳ ಮೂಲಕ ಆನಂದ್ ಸಿಂಗ್ ಅವರ ಮನವೊಲಿಸುವ ಯತ್ನ ಮಾಡಿದ್ದು, ಶ್ರೀಗಳು ಕೂಡ ಭರವಸೆ ನೀಡಿದ್ದಾರೆ ಎಂದು ಹೇಳಲಾಗಿದೆ.
ಕಂಪ್ಲಿ ಗಣೇಶ್ -ಆನಂದ್ ಸಿಂಗ್ ಕೇಸ್ಗೆ ಬಿಗ್ ಟ್ವಿಸ್ಟ್..!
TRENDING ARTICLES