Wednesday, January 22, 2025

ಕಾಂಗ್ರೆಸ್​ ಮುಂದೆ ಮಂಡಿಯೂರಲು ನಾವು ಭಿಕ್ಷುಕರಲ್ಲ ಅಂದ್ರು ಸಿಎಂ ಕುಮಾರಸ್ವಾಮಿ..!

ಮೈಸೂರು : ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ‘ದೋಸ್ತಿ’ ಕಾಂಗ್ರೆಸ್ ವಿರುದ್ಧ ಮತ್ತೆ ಗರಂ ಆಗಿದ್ದಾರೆ.
ಲೋಕಸಭಾ ಸೀಟು ಹಂಚಿಕೆ ವಿಚಾರಕ್ಕೆ ಸಂಬಂಧಪಟ್ಟಂತೆ ಅವರು ‘ಕೈ’ಗೆ ತಿರುಗೇಟು ನೀಡಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ‘ ನಮಗೆ ಏಳೋ, ಐದೋ, ಮೂರೋ? ಎಷ್ಟು ಸೀಟು ಬಿಟ್ಟು ಕೊಡ್ತಾರೋ ಗೊತ್ತಿಲ್ಲ. ನಾವು ಕಾಂಗ್ರೆಸ್ ಮುಂದೆ ಮಂಡಿಯೂರಲು ಬೆಗ್ಗರ್ಸ್​ಗಳಲ್ಲ. ನಾವೆಲ್ಲರೂ ಕೂತು ಸೀಟು ಹಂಚಿಕೆ ಬಗ್ಗೆ ಚರ್ಚಿಸಿ ತೀರ್ಮಾನ ಮಾಡ್ಬೇಕು. ನಮ್ಮ ಪಕ್ಷದ ರಾಷ್ಟ್ರಾಧ್ಯಕ್ಷರು ಕಾಂಗ್ರೆಸ್ ಜೊತೆ ಮಾತನಾಡಿ ಸೀಟು ಹಂಚಿಕೆ ಮಾಡಿಕೊಳ್ತಾರೆ. ನಾನು ಈ ಸ್ಥಾನ ಹಂಚಿಕೆ ಬಗ್ಗೆ ಯೋಚನೆ ಮಾಡಿಲ್ಲ’ ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES