ಹಾಸನ : ಪಾಕಿಸ್ತಾನವನ್ನು ಶತ್ರುರಾಷ್ಟ್ರ ಅಂತ ಘೋಷಣೆ ಮಾಡಿದ್ರೆ ಏನು ಪ್ರಯೋಜನವಿಲ್ಲ ಅಂತ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿಯವರು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇಂದು ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು “ ದೇವೇಗೌಡರು ಪ್ರಧಾನಿಗಳಾಗಿದ್ದಾಗ ಪಾಕಿಸ್ತಾನ ಹಾಗೂ ಭಾರತದ ನಡುವೆ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆದಿರಲಿಲ್ಲ. ಈಗ ಯಾಕೆ ಈ ರೀತಿ ನಡೆಯುತ್ತಿದೆ ಅಂತ ನಾವು ಯೋಚಿಸಬೇಕು. ವೇದಿಕೆಗಳ ಮೇಲೆ ನಿಮ್ಮ ದುಖಃದಲ್ಲಿ ನಮ್ಮ ದುಖಃವೂ ಇದೆ ಅಂತ ಆಕ್ರೋಶಭರಿತರಾಗಿ ಮಾತನಾಡಿದರೆ ಪರಿಹಾರ ಸಿಗುತ್ತದೆಯೇ? ಪಾಕಿಸ್ತಾನವನ್ನು ಶತ್ರುರಾಷ್ಟ್ರ ಅಂತ ಘೋಷಿಸಿದರೆ ಏನು ಪ್ರಯೋಜನ ವಿಲ್ಲ. ಎರಡು ರಾಷ್ಟ್ರಗಳ ನಡುವೆ ಶಾಂತಿ -ಸೌಹಾರ್ದತೆ ಕಾಪಾಡುವುದು ಹೇಗೆ ಎಂದು ಕಂಡುಕೊಳಬೇಕಾಗಿದೆ” ಎಂದು ನರೇಂದ್ರ ಮೋದಿಯವರ ವಿರುದ್ದ ಟೀಕಾ ಪ್ರಹಾರ ನಡೆಸಿದರು.
ಪಾಕಿಸ್ತಾನವನ್ನು ಶತ್ರುರಾಷ್ಟ್ರ ಅಂತ ಘೋಷಿಸಿದ್ರೆ ಪ್ರಯೋಜನವಿಲ್ಲ : ಸಿಎಂ ಕುಮಾರಸ್ವಾಮಿ
TRENDING ARTICLES