Wednesday, January 22, 2025

ಯೂಟರ್ನ್​ ಹೊಡೆದ್ರು ತಲೈವಾ – ಚುನಾವಣೆಯಲ್ಲಿ ಸ್ಪರ್ಧಿಸಲ್ವಂತೆ ರಜನಿಕಾಂತ್..!

ಚೆನ್ನೈ : ನಟ, ರಾಜಕಾರಣಿ ರಜನಿಕಾಂತ್ ಯೂಟರ್ನ್​ ಹೊಡೆದಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ತಾವು ಸ್ಪರ್ಧಿಸಲ್ಲ ಅಂತ ರಜನಿಕಾಂತ್ ಹೇಳಿದ್ದಾರೆ.
‘ಲೋಕಸಭಾ ಚುನಾವಣೆಯಲ್ಲಿ ತಾವು ಸ್ಪರ್ಧೆ ಮಾಡಲ್ಲ ಹಾಗೂ ನಮ್ಮ ಪಕ್ಷ ಯಾವ ಪಕ್ಷಕ್ಕೂ ಬೆಂಬಲ ನೀಡಲ್ಲ. ನಮ್ಮ ಗುರಿ ಅಸೆಂಬ್ಲಿ ಎಲೆಕ್ಷನ್ ಮಾತ್ರ. ಆದ್ದರಿಂದ ರಜನಿ ಫ್ಯಾನ್ಸ್ ಕ್ಲಬ್​ ಮತ್ತು ರಜನಿ ಮಕ್ಕಳ್​ ಮಂದ್ರಾಮ್​ ಹೆಸರಲ್ಲಿ ತಮ್ಮ ಫೋಟೋ ಮತ್ತು ಧ್ವಜಗಳನ್ನು ಯಾವುದೇ ಪಕ್ಷಗಳ ಪ್ರಚಾರ, ಬೆಂಬಲಕ್ಕೆ ಬಳಕೆ ಮಾಡಬಾರದು’ ಎಂದಿದ್ದಾರೆ.
ತಮಿಳುನಾಡಿನಲ್ಲಿ ನೀರಿನ ಸಮಸ್ಯೆ ತೀವ್ರವಾಗಿದ್ದು, ಈ ವಿಚಾರವನ್ನು ಬಗೆಹರಿಸುವ ನಂಬಿಕೆ ಇರುವ ಪಕ್ಷಕ್ಕೆ ಲೋಕಸಭಾ ಚುನಾವಣೆಯಲ್ಲಿ ಮತ ನೀಡಿ ಎಂದು ಮನವಿ ಮಾಡಿದ್ದಾರೆ.

RELATED ARTICLES

Related Articles

TRENDING ARTICLES