ಮಂಡ್ಯ : ‘ನನ್ನ ಜೊತೆ ಕಾಂಗ್ರೆಸ್ನಲ್ಲಿದ್ದವರು ಬಿಜೆಪಿಗೆ ಬರಬೇಕು’ ಅಂತ ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ತಮ್ಮ ಬೆಂಬಲಿಗರಿಗೆ ಕರೆ ನೀಡಿದ್ದಾರೆ.
ಮದ್ದೂರಿನಲ್ಲಿ ಮಾತನಾಡಿದ ಅವರು, ‘ನನ್ನ ಜೊತೆ ಕಾಂಗ್ರೆಸ್ನಲ್ಲಿದ್ದವರು ಬಿಜೆಪಿಗೆ ಬರಬೇಕು ಅನ್ನೋದು ನನ್ನ ಆಸೆ. ಇಂದು ನಾನು ಕರೆ ಕೊಡ್ತಿದ್ದೇನೆ. ನಿರಂತರವಾಗಿ ಈ ಬಗ್ಗೆ ಬೆಂಬಲಿಗರ ಜೊತೆ ಮಾತನಾಡುತ್ತಿದ್ದೇನೆ’ ಅಂತ ಹೇಳಿದ್ರು.
ಕಾಂಗ್ರೆಸ್ ಮತ್ತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಗುಡುಗಿದ ಅವರು, ತಾವು ಕಾಂಗ್ರೆಸ್ಗೆ ಕೈಕೊಟ್ಟಿದ್ದೇಕೆ ಅನ್ನೋದನ್ನು ಸಹ ಬಹಿರಂಗಗೊಳಿಸಿದ್ರು.
‘ರಾಹುಲ್ ಗಾಂಧಿ ಹಸ್ತಕ್ಷೇಪದಿಂದ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದೆ. 80 ವರ್ಷ ಮೀರಿದವರು ಸರ್ಕಾರದಲ್ಲಿ ಬೇಡ ಎಂದು ರಾಹುಲ್ ಗಾಂಧಿ ಹೇಳಿದ್ರು. ಈ ಮಾತು ನನ್ನ ಕಿವಿಗೆ ಬಿದ್ದ ತಕ್ಷಣ ರಾಜೀನಾಮೆ ಕೊಟ್ಟಿದ್ದೆ. ಮನಮೋಹನ್ ಸಿಂಗ್ ಅವರ ಆಡಳಿತದಲ್ಲಿ ರಾಗಾ ಹಸ್ತಕ್ಷೇಪ ಹೆಚ್ಚಿತ್ತು. ರಾಗಾ ನೀತಿ ನಿಲುವುಗಳಿಗೆ ಬೇಸತ್ತು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದೆ’ ಅಂತ ಕಾಂಗ್ರೆಸ್ ಬಿಟ್ಟಿದ್ದಕ್ಕೆ ಕಾರಣವನ್ನು ಬಿಚ್ಚಿಟ್ಟರು.
ಸುಮಲತಾ ಅಂಬರೀಶ್ ಅವರು ಬಿಜೆಪಿಗೆ ಬರೋ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ‘ಆ ವಿಚಾರ ನಂಗೆ ಗೊತ್ತಿಲ್ಲ’ ಅಂತ ಹೇಳಿದ್ರು.
‘ನನ್ನ ಜೊತೆ ಕಾಂಗ್ರೆಸ್ನಲ್ಲಿದ್ದವರು ಬಿಜೆಪಿಗೆ ಬನ್ನಿ’ : ಎಸ್.ಎಂ ಕೃಷ್ಣ
TRENDING ARTICLES