Wednesday, January 22, 2025

ಆಪರೇಷನ್ ಕಮಲಕ್ಕೆ ಚಿತ್ರಕಥೆ ಬರೆದಿದ್ದು ಅಮಿತ್​ ಶಾ ಅಂತೆ..!

ನವದೆಹಲಿ : ಆಪರೇಷನ್ ಕಮಲಕ್ಕೆ ಚಿತ್ರಕಥೆ ಬರೆದಿರೋದು ಅಮಿತ್ ಶಾ ಅಂತೆ..! ಈಗಂತ ಹೇಳಿರೋದು ಕಾಂಗ್ರೆಸ್​ ವಕ್ತಾರ ರಣದೀಪ್​ ಸುರ್ಜೇವಾಲಾ.
ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್ ಮುಖಂಡರು ಬಿಜೆಪಿ ವಿರುದ್ಧ ಟೀಕಪ್ರಹಾರ ನಡೆಸಿದ್ದಾರೆ. ‘ಕರ್ನಾಟಕ ಸರ್ಕಾರ ಬೀಳಿಸಲು 450 ಕೋಟಿ ರೂಪಾಯಿ ಹೂಡಿಕೆ ಮಾಡಲಾಗಿದೆ, ಒಬ್ಬೊಬ್ಬ ಶಾಸಕರಿಗೆ ಯಡಿಯೂರಪ್ಪ 10 ಕೋಟಿ ಆಫರ್​ ಮಾಡಿದ್ದಾರೆ. ಈ ಆಪರೇಷನ್ ಕಮಲಕ್ಕೆ ಚಿತ್ರಕಥೆ ಬರೆದಿದ್ದೇ ಅಮಿತ್ ಶಾ. ಪ್ರಜಾಪ್ರಭುತ್ವದ ಬಗ್ಗೆ ತುಂಬಾನೇ ಮಾತನಾಡುವ ನರೇಂದ್ರ ಮೋದಿ, ಕರ್ನಾಟಕದಲ್ಲಿ ಹೊಸ ಮಾದರಿ ತರಲು ಮುಂದಾಗಿದ್ದಾರಾ? ಆಪರೇಷನ್​ ಕಮಲಕ್ಕೆ ಬಳಕೆ ಆಗ್ತಿರೋದು ಕಪ್ಪು ಹಣವೋ? ಬಿಳಿ ಹಣವೋ ಎಂದು ರಣದೀಪ್​ ಸುರ್ಜೇವಾಲಾ ಪ್ರಶ್ನಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​, ಕರ್ನಾಟಕದ ಉಸ್ತುವಾರಿ ಕೆ.ಸಿ. ವೇಣುಗೋಪಾಲ್​ ಉಪಸ್ಥಿತರಿದ್ದರು.

RELATED ARTICLES

Related Articles

TRENDING ARTICLES