ಕೋಲಾರ : ಬಿಜೆಪಿ ವಿರುದ್ಧ ನಿನ್ನೆ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಆಪರೇಷನ್ ಬಾಂಬ್ ಸಿಡಿಸಿದ್ದು ಗೊತ್ತೇ ಇದೆ. ಇದೀಗ ಕಾಂಗ್ರೆಸ್ ಶಾಸಕರೊಬ್ಬರು ಮತ್ತೊಂದು ಬಾಂಬ್ ಸಿಡಿಸಿದ್ದಾರೆ.
”ಪಕ್ಷಕ್ಕೆ ಬರುವಂತೆ ತನಗೆ ಬಿಜೆಪಿ 50 ಕೋಟಿ ನಗದು ಮತ್ತು ಮಂತ್ರಿ ಸ್ಥಾನದ ಆಮಿಷವೊಡ್ಡಿದೆ. ಈಗಲೂ ಬಿಜೆಪಿ ಮುಖಂಡರು ನನ್ನನ್ನು ಸಂಪರ್ಕ ಮಾಡ್ತಿದ್ದಾರೆ” ಅಂತ ಮಾಲೂರು ಶಾಸಕ ನಂಜೇಗೌಡ ಹೇಳಿದ್ದಾರೆ.
‘ಬಿಜೆಪಿ ನಾಯಕರು ನನ್ನನ್ನು ಸಂಪರ್ಕಿಸಿ ಆಮಿಷವೊಡ್ಡುತ್ತಿದ್ದಾರೆ. ಆದರೆ, ನಾನು ಮಾರಾಟಕ್ಕಿಲ್ಲ. ಬಿಜೆಪಿ ನಾಯಕರಿಗೂ ನಾನು ಇದೇ ಹೇಳಿದ್ದೇನೆ’ ಎಂದಿದ್ದಾರೆ ನಂಜೇಗೌಡ್ರು.