Monday, December 23, 2024

ಪಕ್ಷದ ಶಾಸಕರನ್ನು ಉಳಿಸಿಕೊಳ್ಳೋ ವರಿಷ್ಠರ ಪ್ರಯತ್ನ ಫಲ ನೀಡುತ್ತಾ?

ಬೆಂಗಳೂರು: ದೋಸ್ತಿಗಳ ವೈಮನಸ್ಸಿನ ನಡುವೆ ಇಂದಿನಿಂದ ವಿಧಾನಮಂಡಲ ಜಂಟಿ ಅಧಿವೇಶನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಶಾಸಕರು ಅಧಿವೇಶನಕ್ಕೆ ಕಡ್ಡಾಯವಾಗಿ ಹಾಜರಾಗುವಂತೆ ಈಗಾಗ್ಲೆ ವಿಪ್‌ ಜಾರಿಗೊಳಿಸಲಾಗಿದೆ. ಶಾಸಕರನ್ನು ಉಳಿಸಿಕೊಳ್ಳಲು ಪಕ್ಷದ ವರಿಷ್ಠರು ಪರದಾಡುತ್ತಿದ್ದು, ಭೋಜನಕೂಟ, ಉಪಹಾರ ಕೂಟಗಳನ್ನು ನಡೆಸುತ್ತಿದ್ದಾರೆ. ಇಷ್ಟೆಲ್ಲ ಮಾಡಿಯೂ ಪಕ್ಷದ ಶಾಸಕರನ್ನು ಉಳಿಸಿಕೊಳ್ಳುವಲ್ಲಿ ನಾಯಕರು ಸಫಲರಾಗ್ತಾರಾ ಅನ್ನೋದನ್ನು ಕಾದು ನೋಡಬೇಕು.

ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಕೇಸರಿ ಪಡೆ ಬಿಗ್ ಪ್ಲಾನ್‌ ಮಾಡಿಕೊಂಡಿದೆ. ಸರ್ಕಾರವನ್ನೇ ಉರುಳಿಸುವ ತಂತ್ರಗಾರಿಕೆಯೂ ಸಿದ್ಧಗೊಂಡಿದ್ದು, ‘ಕೈ’ ಅತೃಪ್ತರನ್ನು ಅಧಿವೇಶನಕ್ಕೆ ಗೈರಾಗುವಂತೆ ನೋಡಿಕೊಳ್ಳಲು ಬಿಜೆಪಿ ಮಾಸ್ಟರ್‌ ಪ್ಲಾನ್‌ ಮಾಡಿದೆಯಂತೆ. ಬಿಜೆಪಿಯ ಕೆಲವು ಶಾಸಕರು ಕೂಡ ದೋಸ್ತಿಗಳ ಜೊತೆ ಸಂಪರ್ಕ ಹೊಂದಿದ್ದಾರೆ ಅನ್ನೋ ಭೀತಿ ಕೂಡ ಬಿಜೆಪಿಗೆ ತಪ್ಪಿಲ್ಲ. ಹೀಗಾಗಿ ಕೇಸರಿ ಪಡೆ ಕೂಡ ಪಕ್ಷದ ಎಲ್ಲ ಶಾಸಕರು ಅಧಿವೇಶನಕ್ಕೆ ಹಾಜರಾಗ್ಲೇಬೇಕು ಅಂತಾ ವಿಪ್‌ ಜಾರಿಗೊಳಿಸಿದೆ.

 ‘ಕೈ’ ತಪ್ಪುವ ಶಾಸಕರನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ಕಾಂಗ್ರೆಸ್‌ ಶತಪ್ರಯತ್ನ ನಡೆಸ್ತಿದೆ. ಈ ಹಿನ್ನೆಲೆಯಲ್ಲಿ ಶಾಸಕರು ಮತ್ತು ಸಚಿವರಿಗೆ ಔತಣಕೂಟಗಳ ಮೇಲೆ ಔತಣಕೂಟ ನೀಡಲಾಗ್ತಿದೆ. ನಿನ್ನೆಯಷ್ಟೇ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಎಲ್ಲ ಸಚಿವರು ಶಾಸಕರಿಗೆ ಭರ್ಜರಿ ಔತಣಕೂಟ ನೀಡಿದ್ರು. ಇಂದು ಮತ್ತೆ ಡಿಸಿಎಂ ಡಾ.ಜಿ.ಪರಮೇಶ್ವರ್, ತಮ್ಮ ಪಕ್ಷದ ಸಚಿವರು ಮತ್ತು ಶಾಸಕರಿಗೆ ಔತಣಕೂಟ ಏರ್ಪಡಿಸಿದ್ದಾರೆ.

RELATED ARTICLES

Related Articles

TRENDING ARTICLES