Monday, December 23, 2024

ದೊಡ್ಮನೆಗೆ ಎಂಟ್ರಿಕೊಟ್ಟ ಡೈರೆಕ್ಟರ್ ಚೇತನ್..!

ಚೇತನ್​ ಕುಮಾರ್…, ಸದ್ಯ ಹ್ಯಾಟ್ರಿಕ್​ ಗೆಲುವಿನ ನಿರೀಕ್ಷೆಯಲ್ಲಿರೋ ಡೈರೆಕ್ಟರ್. ಮೊದಲ ಚಿತ್ರ ‘ಬಹದ್ದೂರ್​’ ನಲ್ಲೇ ಭರವಸೆ ಮೂಡಿಸಿ, ಸೆಕೆಂಡ್​ ಮೂವಿಯಲ್ಲಿ ‘ಭರ್ಜರಿ’ ಸೌಂಡು ಮಾಡಿ ‘ಭರಾಟೆ’ಯಲ್ಲಿ ಬ್ಯುಸಿ ಇದ್ದಾರೆ. ಈಗ ದೊಡ್ಮನೆಗೆ ಎಂಟ್ರಿಕೊಡ್ತಿದ್ದಾರೆ.
ಹೌದು, ಪವರ್ ಸ್ಟಾರ್ ಪುನೀತ್​ ರಾಜ್ ಕುಮಾರ್ ಅಭಿನಯದ ಹೊಸ ಸಿನಿಮಾ ‘ಜೇಮ್ಸ್​’ಗೆ ಆ್ಯಕ್ಷನ್​ ಕಟ್ ಹೇಳಲು ರೆಡಿಯಾಗಿದ್ದಾರೆ ಡೈರೆಕ್ಟರ್ ಚೇತನ್ ಕುಮಾರ್.
ಪುನೀತ್ ‘ಜೇಮ್ಸ್​’ ಅನ್ನೋ ಸಿನಿಮಾದಲ್ಲಿ ನಟಿಸ್ತಾರೆ ಅನ್ನೋದು ಬಹಳ ಹಿಂದೆಯೇ ಕೇಳಿಬಂದಿದ್ದ ಮಾತು. ಆದರೆ, ಅದ್ಯಾಕೋ ಇದ್ದಕ್ಕಿದ್ದಂತೆ ಆ ಸಿನಿಮಾ ಕುರಿತ ನ್ಯೂಸ್​ ಮತ್ತೆಲ್ಲೂ ಹರಿದಾಡಿರಲೇ ಇಲ್ಲ. ಸಿನಿಮಾ ಏನಾಯ್ತ ಅನ್ನೋದು ಗೊತ್ತಾಗಿರ್ಲಿಲ್ಲ. ಇದೀಗ ಮತ್ತೆ ‘ಜೇಮ್ಸ್​’ ಸೌಂಡು ಮಾಡಿದೆ.
‘ಜೇಮ್ಸ್​’ ಗೆ ಡೈರೆಕ್ಟರ್ ಕೂಡ ಸಿಕ್ಕಿದ್ದಾರೆ. ಚೇತನ್ ಕುಮಾರ್ ‘ಜೇಮ್ಸ್​’ ಮೂಲಕ ದೊಡ್ಮನೆಗೆ ಎಂಟ್ರಿಕೊಟ್ಟಿದ್ದಾರೆ. ಚೇತನ್ ಕುಮಾರ್ ಇದೇ ಮೊದಲ ಬಾರಿಗೆ ದೊಡ್ಮನೆ ಮಗನಿಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಚೇತನ್​ ಕುಮಾರ್ ಅವರ ಮೊದಲ ಎರಡು ಚಿತ್ರಗಳಾದ ‘ಬಹದ್ದೂರ್’ ಮತ್ತು ‘ಭರ್ಜರಿ’ಗೆ ಧ್ರುವ ಸರ್ಜಾ ಹೀರೋ ಆಗಿದ್ದರು. ಈಗ ಚೇತನ್ ‘ಭರಾಟೆ’ಯಲ್ಲಿ ಬ್ಯುಸಿ. ಚಿತ್ರೀಕರಣ ಹಂತದಲ್ಲಿರೋ ‘ಭರಾಟೆ’ ಈಗಾಗಲೇ ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟು ಹಾಕಿದೆ. ರೋರಿಂಗ್ ಸ್ಟಾರ್ ಶ್ರೀಮುರಳಿ ಮತ್ತು ಚೇತನ್ ಕುಮಾರ್ ಕಾಂಬಿನೇಷನ್​ನ ಚೊಚ್ಚಲ ಚಿತ್ರ ಇದು.
ಇನ್ನು ಪುನೀತ್ ರಾಜ್​ ಕುಮಾರ್ ಅವರ ‘ನಟ ಸಾರ್ವಭೌಮ’ ನಾಳೆ ರಿಲೀಸ್ ಆಗುತ್ತಿದೆ. ಮಾರ್ಚ್​ 17 ರಂದು ಪುನೀತ್​ ಹುಟ್ಟುಹಬ್ಬ. ಆ ದಿನವೇ ‘ಜೇಮ್ಸ್’ ಸೆಟ್ಟೇರಲಿದೆ.

RELATED ARTICLES

Related Articles

TRENDING ARTICLES