Tuesday, October 15, 2024

ಕಾಂಗ್ರೆಸ್​​ ಜಾತಿಗಳ ನಡುವೆ ವೈರತ್ವ ಬಿತ್ತುತ್ತಿದೆ ಅಂತ ರಾಜೀನಾಮೆ ನೀಡಿದ ಶಾಸಕಿ!

ಅಹಮದಾಬಾದ್​ : ಕಾಂಗ್ರೆಸ್​ ಪಕ್ಷ ಜಾತಿ-ಜಾತಿಗಳ ನಡುವೆ ವೈರತ್ವ ಬಿತ್ತುತ್ತಿದೆ ಅಂತ ಹೇಳಿ ಕಾಂಗ್ರೆಸ್​ ಶಾಸಕಿಯೊಬ್ಬರು ತಮ್ಮ ಸ್ಥಾನ ಮತ್ತು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
ಗುಜರಾತ್​ನ ಶಾಸಕಿ ಆಶಾ ಪಟೇಲ್ ಕಾಂಗ್ರೆಸ್ ವಿರುದ್ಧ ಧ್ವನಿ ಎತ್ತಿ ಪಕ್ಷಕ್ಕೆ ಮತ್ತು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದವರು.
ಕಾಂಗ್ರೆಸ್​ ಜಾತಿಗಳ ನಡುವೆ ವೈರತ್ವ ಮೂಡುವಂತೆ ಮಾಡ್ತಿದೆ. ಪ್ರಧಾನಿ ನರೇಂದ್ರ ಮೋದಿ ಮೀಸಲಾತಿ ಜಾರಿಗೆ ತರೋ ಮೂಲಕ ಜಾತಿಗಳನ್ನು ಒಗ್ಗೂಡಿಸ್ತಿದ್ದಾರೆ. ಕಾಂಗ್ರೆಸ್​ನ ಗುಂಪುಗಾರಿಕೆ, ಒಳಜಗಳಗಳಿಂದ ಬೇಸತ್ತಿದ್ದೇನೆ ಎಂದು ಹೇಳಿ ಎಐಸಿಸಿ ಅಧ್ಯಕ್ಷ ರಾಹುಲ್​ಗಾಂಧಿ ಅವರಿಗೆ ಪತ್ರ ಬರೆದು ಗುಡ್​ ಬೈ ಹೇಳಿದ್ದಾರೆ.
ಆಶಾ ಪಟೇಲ್ ಮೆಹ್ಸಾನ ಜಿಲ್ಲೆಯ ಉಂಝಾ ಕ್ಷೇತ್ರವನ್ನು ಪ್ರತಿನಿಧಿಸಿದ್ರು. ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟೂರು ವಡನಗರವೂ ಇದೇ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುತ್ತೆ.

RELATED ARTICLES

Related Articles

TRENDING ARTICLES