ಬೆಂಗಳೂರು: ಆಪರೇಷನ್ ಕಮಲದ ಭೀತಿಯಲ್ಲಿರುವ ಮೈತ್ರಿ ಸರ್ಕಾರದ ವರಿಷ್ಠರು ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಡಿಸಿಎಂ ಡಾ. ಜಿ ಪರಮೇಶ್ವರ್ ಅವರು ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರಿಗಾಗಿ ಔತಣಕೂಟವನ್ನು ಏರ್ಪಡಿಸಿದ್ದಾರೆ.
ಫೆಬ್ರವರಿ 6ರಂದು ಬೆಂಗಳೂರಿನ ರ್ಯಾಡಿಸನ್ ಬ್ಲ್ಯೂ ಹೊಟೇಲ್ನಲ್ಲಿ ಔತಣಕೂಟು ಆಯೋಜಿಸಲಾಗಿದೆ. ಈ ಭೋಜನಕೂಟಕ್ಕೆ ಬೆಂಗಳೂರಿನ ಕಾಂಗ್ರೆಸ್ ಸಂಸದರಿಗೂ ವಿಶೇಷ ಆಹ್ವಾನ ನೀಡಲಾಗಿದ್ದು, ಎರಡೂ ಪಕ್ಷದ ಪ್ರಮುಖರು ಆಪರೇಷನ್ ಕಮಲಕ್ಕೆ ಪ್ರತ್ಯುತ್ತರ ನೀಡುವ ಕುರಿತು ಚರ್ಚಿಸಲಿದ್ದಾರೆ.
ಬಜೆಟ್ ಅಧಿವೇಶನದ ಮೇಲೆ ಆಪರೇಷನ್ ಕರಿನೆರಳು ಬೀಳುವ ಸಾಧ್ಯತೆಗಳ ಕುರಿತು ವರಿಷ್ಠರು ಚಿಂತೆಗೆ ಬಿದ್ದಿದ್ದಾರೆ. ಆಪರೇಷನ್ ಕಮಲದ ಭಯಕ್ಕೆ ತತ್ತರಿಸಿರುವ ಕೈ-ತೆನೆ ನಾಯಕರು ಶಾಸಕರನ್ನು ಉಳಿಸಕೊಳ್ಳುವಲ್ಲಿ ಹೆಚ್ಚು ಗಮನ ಕೊಡುತ್ತಿದ್ದಾರೆ.