ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಪ್ರಸಕ್ತ ಅವಧಿಯ ಕೊನೆಯ ಬಜೆಟ್ ಮಂಡನೆ ಆಗುತ್ತಿದೆ. ಹಂಗಾಮಿ ವಿತ್ತ ಸಚಿವ (ಹಣಕಾಸು ಸಚಿವ) ಪಿಯೂಷ್ ಗೋಯಲ್ ಬಜೆಟ್ ಮಂಡಿಸುತ್ತಿದ್ದಾರೆ. ಈಗಾಗಲೇ ಗೋಯಲ್ ಬಜೆಟ್ ಸೂಟ್ಕೇಸ್ ತಗೊಂಡು ರಾಷ್ಟ್ರಪತಿ ಭವನಕ್ಕೆ ತೆರಳಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಬಜೆಟ್ ವಿವರಣೆ ನೀಡಿ, ಅವರ ಅಂಕಿತ ಪಡೆದಿದ್ದಾರೆ. ಲೋಕಸಭಾ ಚುನಾವಣಾ ಸನಿಹದಲ್ಲಿ ಮಂಡನೆ ಆಗುತ್ತಿರುವ ಈ ಬಜೆಟ್ ‘ಚುನಾವಣಾ ಬಜೆಟ್’ ಎಂದೇ ಕರೆಯಲ್ಪಡುತ್ತಿದ್ದು. ಲೆಕ್ಕಾಚಾರ-2019 ರ Live ಅಪ್ಡೇಟ್ಸ್ ಇಲ್ಲಿದೆ.
ಲೆಕ್ಕಾಚಾರ 2019:
- 2030ರ ಹೊತ್ತಿಗೆ ನೆಕ್ಸ್ಟ್ ಜನರೇಶನ್ನ ಅತ್ಯಾಧುನಿಕ ಮೂಲಭೂತ ಸೌಲಭ್ಯವನ್ನು ಒದಗಿಸಲಾಗುತ್ತದೆ ಎಂದು ಹಂಗಾಮಿ ಹಣಕಾಸು ಸಚಿವ ಪಿಯೂಶ್ ಗೋಯಲ್ ಹೇಳಿದ್ದಾರೆ.
- ಭಾರತ ಎಲೆಕ್ಟ್ರಿಕ್ ವಾಹನಗಳನ್ನು ಉಪಯೋಗಿಸುವುದರಲ್ಲಿ ಜಗತ್ತಿನ ದೇಶಗಳ ನಾಯಕತ್ವ ವಹಿಸಲಿದೆ.
- 2030ರ ವೇಳೆಗೆ ಡಿಜಿಟಲ್ ಇಂಡಿಯಾ ಭಾರತದ ಪ್ರತಿ ಪ್ರಜೆಯನ್ನು ತಲುಪಲಿದೆ.
- ಆಧುನಿಕ ತಂತ್ರಜ್ಞಾನದ ಮೂಲಕ ಗ್ರಾಮೀಣ ಭಾರತದ ಕೈಗಾರಿಕೆಯನ್ನು ಅಭಿವೃದ್ಧಿಪಡಿಸಲಾಗುತ್ತದೆ.
- ಶುದ್ಧ ಕುಡಿಯುವ ನೀರನ್ನು ಒದಗಿಸುವುದರೊಂದಿಗೆ, ನದಿಗಳನ್ನು ಸ್ವಚ್ಛ ಮಾಡುವುದು.
- 2022ರೊಳಗಾಗಿ ಭಾರತದ ಆಸ್ಟ್ರೋನಟ್ನ್ನು ಸ್ಪೇಸ್ಗೆ ತಲುಪಿಸುವುದು.
- ವಾರ್ಷಿಕ 5 ಲಕ್ಷದ ತನಕ ಆದಾಯ ಪಡೆಯುವ ವೈಯಕ್ತಿಕ ತೆರಿಗೆ ಪಾವತಿದಾರರಿಗೆ ಸಂಪೂರ್ಣ ತೆರಿಗೆ ವಿನಾಯಿತಿ
- 6.5 ಲಕ್ಷ ವಾರ್ಷಿಕ ಆದಾಯವಿರುವ ಕುಟುಂಬ ಬಂಡವಾಳ ಹೂಡಿಕೆ ಮಾಡಿದಲ್ಲಿ ತೆರಿಗೆ ವಿನಾಯಿತಿ
- ಬ್ಯಾಂಕ್ ಹಾಗೂ ಪೋಸ್ಟ್ ಆಫೀಸ್ನಲ್ಲಿ 10,000ದಿಂದ 40,000 ಡೆಪಾಸಿಟ್ ಬಡ್ಡಿಗೆ ಟಿಡಿಎಸ್ ಮಿತಿ ನಿಗದಿ.
- 1.8 ಲಕ್ಷದಿಂದ 2.4 ಬಾಡಿಗೆ ಆದಾಯದ ಮೇಲೆ ಟಿಡಿಎಸ್ ಕಡಿತ
- 2 ಲಕ್ಷದವರೆಗಿನ ಗೃಹ ಸಾಲಕ್ಕೆ ತೆರಿಗೆ ವಿನಾಯತಿ ನೀಡಲಾಗುತ್ತದೆ.
- ಸ್ಟಾಂಡರ್ಡ್ ಟ್ಯಾಕ್ಸ್ ಡಿಡಕ್ಷನ್ 40,000 ಕ್ಕೆ ಏರಿಕೆ 50,000
- ಕಿಸಾನ್ ಸಮ್ಮಾನ್ ಯೋಜನೆ ಮೂಲಕ 2 ಹೆಕ್ಟೇರ್ ಗಿಂತ ಕಮ್ಮಿ ಜಮೀನು ಹೊಂದಿರೋ ರೈತರ ಖಾತೆಗೆ ನೇರವಾಗಿ 6 ಸಾವಿರ ರೂ ಮಂಜೂರು ಮಾಡ್ತಿದ್ದೇವೆ. ಈ ಹಣ 3 ಕಂತುಗಳಲ್ಲಿ ರೈತರ ಖಾತೆಗೆ ಜಮಾ ಮಾಡ್ತೀವಿ. ಈ ಯೋಜನೆ 12 ಕೋಟಿ ರೈತ ಕುಟುಂಬಗಳಿಗೆ ವರದಾನ – ಪಿಯೂಷ್ ಗೋಯಲ್
ಪಿಯೂಷ್ ಗೋಯಲ್ ಹೇಳಿದ ಸರ್ಕಾರದ ಸಾಧನೆಗಳು:
- ಜಿಎಸ್ಟಿಯನ್ನು ಕಡಿಮೆ ಮಾಡಲಾಗಿದೆ. ಬಡ ಮತ್ತು ಮಧ್ಯಮ ವರ್ಗದ ಅಗತ್ಯ ವಸ್ತುಗಳ ತೆರಿಗೆ ಕೇವಲ0-5ರಷ್ಟು ಮಾತ್ರ ಇದೆ- ಪಿಯೂಷ್ ಗೋಯಲ್
- ತೆರಿಗೆ ಸಂಗ್ರಹ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಸಾಮಾನ್ಯ ಮತ್ತು ಮಧ್ಯಮ ವರ್ಗದವರಿಗೆ ತೆರಿಗೆ ದರವನ್ನು ಕಡಿಮೆ ಮಾಡಿದ್ದೇವೆ. ಕಳೆದ ವರ್ಷ ಶೇ. 99.54ರಷ್ಟು ಐಟಿ ರಿಟರ್ನ್ಸ್ ತಕ್ಷಣ ಸ್ವೀಕರಿಸಲಾಗಿದೆ. ಆದಾಯ ತೆರಿಗೆಯಲ್ಲಿ ಯಾವ್ದೇ ಬದಲ ಇಲ್ಲದೇ ಇದ್ದರೂ ಟ್ಯಾಕ್ಸ್ ಕಲೆಕ್ಷನ್ ಭಾರೀ ಹೆಚ್ಚಳವಾಗಿದೆ – ಪಿಯೂಷ್ ಗೋಯಲ್
- ಕಳೆದ 5 ವರ್ಷಗಳಲ್ಲಿ ಸ್ಥಳೀಯ ವಿಮಾನ ಸಂಚಾರದಲ್ಲಿ ಹೆಚ್ಚಳವಾಗಿರೋದನ್ನು ಗಮನಿಸಬೇಕು. ದೇಶದಲ್ಲಿ ಸದ್ಯ 100 ಕಾರ್ಯನಿರತ ಏರ್ಪೋರ್ಟ್ಗಳಿವೆ -ಪಿಯೂಷ್ ಗೋಯಲ್
- ರಕ್ಷಣಾ ಬಜೆಟ್ ಅನ್ನು 3 ಲಕ್ಷ ಕೋಟಿಗಿಂತಾ ಹೆಚ್ಚಿಸಲಾಗಿದೆ –ಪಿಯೂಷ್ ಗೋಯಲ್
- ಒನ್ ರ್ಯಾಂಕ್ ಒನ್ ಪೆಕ್ಷನ್ ಯೋಜನೆ ಕಳೆದ 40 ವರ್ಷಗಳಿಂದ ನೆನೆಗುದಿಯಲ್ಲಿತ್ತು. ನಮ್ಮ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದ್ದು, 35 ಸಾವಿರ ಕೋಟಿ ಪಿಂಚಣಿಯನ್ನು ಈಗಾಗಲೇ ವಿತರಿಸಲಾಗಿದೆ.
- ಮುದ್ರಾ ಯೋಜನೆಯ ಫಲಾನುಭವಿಗಳಲ್ಲಿ ಶೇ.75ರಷ್ಟು ಮಹಿಳೆಯರೇ ಇದ್ದಾರೆ. ಮಾತೃತ್ವ ಯೋಜನೆಯಡಿ 26ರವಾರಗಳ ಹೆರಿಗೆ ರಜೆ ನೀಡಲಾಗಿದ್ದು, ಮಹಿಳಾ ಸಬಲೀಕರಣ ಸಾಧ್ಯವಾಗುತ್ತಿದ್ದು ಸರ್ಕಾರದ ಹೆಮ್ಮೆ – ಪಿಯೂಷ್ ಗೋಯಲ್
- ಉದ್ಯೋಗಿಗಳು, ಉದ್ಯೋಗ ಹುಡುಕುತ್ತಿದ್ದವರು ಉದ್ಯೋಗ ನೀಡುವಂತಾಗಿದ್ದಾರೆ. ಭಾರತ ವಿಶ್ವದ ಎರಡನೇ ಅತೀ ದೊಡ್ಡ ಸ್ಟಾರ್ಟ್ಅಪ್ ಹಬ್ ಆಗಿ ಮಾರ್ಪಟ್ಟಿದೆ – ಪಿಯೂಷ್ ಗೋಯಲ್
- ಈಶಾನ್ಯ ರಾಜ್ಯದ ಜನರಿಗೆ ಅನುದಾನಗಳನ್ನು ಹೆಚ್ಚಿಸಲಾಗಿದೆ. 58,166 ಕೋಟಿ ರೂಪಾಯಿ ಅನುದಾನವನ್ನು ಈಶಾನ್ಯ ರಾಜ್ಯಗಳ ಅಭಿವೃದ್ಧಿಗೆ ವಿನಿಯೋಗಿಸಲಾಗಿದೆ- ಪಿಯೂಷ್ ಗೋಯಲ್
- ಮೊಬೈಲ್ ಡಾಟಾ ಬಳಕೆ 50 ಪಟ್ಟು ಹೆಚ್ಚಳವಾಗಿದೆ. ಮುಂದಿನ ವರ್ಷಕ್ಕಾಗುವಾಗ 1ಲಕ್ಷ ಗ್ರಾಮಗಳನ್ನು ಡಿಜಿಟಲ್ ವಿಲೇಜ್ ಮಾಡಲು ಗುರಿಹೊಂದಲಾಗಿದೆ. ಭಾರತದಲ್ಲಿ ವಾಯ್ಸ್ಕಾಲ್ ಹಾಗೂ ಡಾಟಾ ಉಳಿದ ದೇಶಗಳಿಗೆ ಹೋಲಿಸಿದಲ್ಲಿ ಕಡಿಮೆ ವೆಚ್ಚದಲ್ಲಿ ಜನರಿಗೆ ಲಭ್ಯವಾಗುತ್ತಿದೆ – ಪಿಯೂಷ್ ಗೋಯಲ್
- ಕಳೆದ 5 ವರ್ಷದಲ್ಲಿ 34 ಕೋಟಿ ಜನಧನ ಖಾತೆಗಳನ್ನು ತೆರೆಯಲಾಗಿದೆ. ಮಧ್ಯಮ ಮತ್ತು ಬಡ ಜನರಿಗೆ ಕೇಂದ್ರದ ಯೋಜನೆ ಫಲಾನುಭವ ನೇರವಾಗಿ ಪಡೆಯಲು ಸಾಧ್ಯವಾಗಿದೆ – ಪಿಯೂಷ್ ಗೋಯಲ್
- ತೆರಿಗೆ ಸಂಗ್ರಹದಲ್ಲಿ 3.79 ರಿಂದ 6.85 ಹೆಚ್ಚಳವಾಗಿದೆ. ಆದಾಯ ತೆರಿಗೆ ಫೈಲ್ ಮಾಡುವ ಸಂಬಂಧ ಆನ್ಲೈನ್ನಲ್ಲೂ ಕೆಲಸ ಮಾಡಲಾಗುತ್ತಿದೆ. 638 ಲಕ್ಷ ಕೋಟಿಯಿಂದ 12ಲಕ್ಷ ಕೋಟಿ ರೂಪಾಯಿಗೆ ತೆರಿಗೆ ಸಂಗ್ರಹ ಹೆಚ್ಚಳವಾಗಿದೆ – ಪಿಯೂಷ್ ಗೋಯಲ್
- ಉಜ್ವಾಲ್ ಯೋಜನೆಡಯಡಿ 6 ಕೋಟಿಯಷ್ಟು ಎಲ್ಪಿಜಿ ಸಂಪರ್ಕವನ್ನು ಕೊಟ್ಟಿದ್ದೇವೆ – ಪಿಯೂಷ್ ಗೋಯಲ್
- ಪ್ರಧಾನಮಂತ್ರಿ ಶ್ರಮಯೋಗಿ ಯೋಜನೆಯ ಅಡಿಯಲ್ಲಿ ಅಸಂಘಟಿತ ವಲಯದ ಕಾರ್ಮಿಕರಿಂದ ಪ್ರತಿ ತಿಂಗಳು 100 ರೂ ಪಡೆದು ಅವರಿಗೆ 60 ವರ್ಷಗಳಾದ್ಮೇಲೆ ಮಾಸಿಕ 3000 ಪಿಂಚಣಿ ನೀಡಲಿದ್ದೇವೆ. ಯೋಜನೆಗೆ 500 ಕೋಟಿ ರೂ ಮೀಸಲು ಇಟ್ಟಿದ್ದೀವಿ- ಪಿಯೂಷ್ ಗೋಯಲ್
- ಶೀಘ್ರದಲ್ಲೇ 7ನೇ ವೇತನ ಆಯೋಗ ಶಿಫಾರಸು ಜಾರಿ ಮಾಡಲಿದ್ದೇವೆ – ಪಿಯೂಷ್ ಗೋಯಲ್
- ತೆರಿಗೆ ರಹಿತ ಗ್ರಾಚ್ಯುಟಿಯನ್ನು 10 ಲಕ್ಷ ದಿಂದ 20 ಲಕ್ಷಕ್ಕೆ ಹೆಚ್ಚಳ – ಪಿಯೂಷ್ ಗೋಯಲ್
- ಅಸಂಘಟಿತ ವಲಯದ ಕಾರ್ಮಿಕರಿಗೆ ಪಿಂಚಣಿ ಯೋಜನೆ ಜಾರಿಗೆ ತಂದಿದ್ದೇವೆ. ಸೇವಾಧಿಯಲ್ಲಿ ಸಾವನ್ನಪ್ಪಿದ ಕಾರ್ಮಿಕರ ಕುಟುಂಬಗಳಿಗೆ 6 ಲಕ್ಷ ಪರಿಹಾರ – ಪಿಯೂಷ್ ಗೋಯಲ್
- ಇಎಸ್ಐ ಮಿತಿಯನ್ನು 21ಸಾವಿರ ರೂಗಳಿಗೆ ಹೆಚ್ಚಿಸಲಾಗಿದೆ – ಪಿಯೂಷ್ ಗೋಯಲ್
- ಪ್ರಕೃತಿ ವಿಕೋಪದಿಂದ ನಷ್ಟ ಅನುಭವಿಸಿದ ರೈತರಿಗೆ ಸಾಲದ ಬಡ್ಡಿಯನ್ನು ಶೇ.2ರಷ್ಟು ಇಳಿಸಿದ್ದೇವೆ. ಸಮಯಕ್ಕೆ ಸರಿಯಾಗಿ ಸಾಲ ಪಾವತಿಸದ ರೈತರಿಗೆ ಶೇ3ರಷ್ಟು ಬಡ್ಡಿ ಇಳಿಕೆ – ಪಿಯೂಷ್ ಗೋಯಲ್
- ರಾಷ್ಟ್ರೀಯ ಗೋಕುಲ್ ಮಿಷನ್ಗೆ ಅನುದಾನ ಹೆಚ್ಚಿಸಿದ್ದೇವೆ. ಪ್ರಸಕ್ತ ಸಾಲಿನಲ್ಲಿ 75 ಕೋಟಿ ರೂ ಅನುದಾನ ನೀಡಲಾಗುವುದು – ಪಿಯೂಷ್ ಗೋಯಲ್
ಮೀನುಗಾರಿಕೆಗೆ ಪ್ರತ್ಯೇಕ ಇಲಾಖೆ ರಚಿಸಲು ತೀರ್ಮಾನಿಸಿದ್ದೇವೆ. ಕಾಮಧೇನು ಆಯೋಗ ಸ್ಥಾಪನೆ ಮಾಡಲಾಗುತ್ತೆ- ಪಿಯೂಷ್ ಗೋಯಲ್ - 22 ಬೆಳೆಗಳ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಿದ್ದೇವೆ- ರೈತರ ಆದಾಯ ದ್ವಿಗುಣವಾಗಿದೆ – ಪಿಯೂಷ್ ಗೋಯಲ್
- ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ 2014-18ರ ಅವಧಿಯಲ್ಲಿ 1.53 ಕೋಟಿ ಮನೆಗಳನ್ನು ಕಟ್ಟಿಸಿ ಕೊಟ್ಟಿದ್ದೇವೆ – ಪಿಯೂಷ್ ಗೋಯಲ್
- ಹರಿಯಾಣ 22 ನೇ ಏಮ್ಸ್ ಆಸ್ಪತ್ರೆ ನಿರ್ಮಾಣ ಮಾಡಿದ್ದೇವೆ – ಪಿಯೂಶ್ ಗೋಯಲ್
- ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಆಯುಷ್ಮಾನ್ ಭಾರತ್ ಅನ್ನೋ ಆರೋಗ್ಯ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆ ವಿಶ್ವದ ಅತೀ ದೊಡ್ಡ ಆರೋಗ್ಯ ಯೋಜನೆ. ಔಷಧಗಳ ಬೆಲೆ ಕಮ್ಮಿ ಆಗಿರೋದ್ರಿಂದ ಜನತೆಗೆ ಅನುಕೂಲವಾಗಿದೆ. ಆಯುಷ್ಮಾನ್ ಭಾರತ್ ನ ಲಾಭವನ್ನು ಸುಮಾರು 50ಕೋಟಿ ಮಂದಿ ಲಾಭ ಪಡೀತಾ ಇದ್ದಾರೆ – ಪಿಯೂಷ್ ಗೋಯಲ್
- ಸೌಭಾಗ್ಯ ಯೋಜನೆ ಮೂಲಕ ಬಹುತೇಕ ಎಲ್ಲರ ಮನೆಗಳಿಗೆ ಬೆಳಕು ನೀಡಿದ್ದೇವೆ (ವಿದ್ಯುತ್) – ಪಿಯೂಷ್ ಗೋಯಲ್
- ಆಹಾರ ಪೂರೈಕೆಗಾಗಿ 1.7 ಲಕ್ಷ ಮೀಸಲಿಟ್ಟಿದ್ದೇವೆ – ಪಿಯೂಷ್ ಗೋಯಲ್
- ನಮ್ಮ ಸರ್ಕಾರ ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಒತ್ತು ನೀಡಿದೆ. ಈ ಅವಧಿಯಲ್ಲಿ ಗ್ರಾಮೀಣ ರಸ್ತೆಗಳ ನಿರ್ಮಣ ಮೂರು ಪಟ್ಟು ಹೆಚ್ಚಾಗಿದೆ. ಆರ್ಥಿಕವಾಗಿ ಹಿಂದುಳಿದವರಿಗೋಸ್ಕರ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ನೀಡುವ ಮಹತ್ವದ ಪ್ರಯತ್ನವನ್ನು ಮಾಡಿದ್ದೀವಿ- ಪಿಯೂಷ್ ಗೋಯಲ್
- ನಮ್ಮ ಸರ್ಕಾರ ವಂಚಕರನ್ನು ಸುಮ್ನೆ ಬಿಟ್ಟಿಲ್ಲ. 3 ಲಕ್ಷ ಕೋಟಿ ರೂಗಳನ್ನು ವಸೂಲಿ ಮಾಡಲಾಗಿದ್ದು, ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಸುಧಾರಣೆ ತಂದಿದ್ದೇವೆ. ಭ್ರಷ್ಟಾಚಾರ ಮುಕ್ತ ಆಡಳಿತವನ್ನು ನೀಡಿದ್ದೇವೆ- ಪಿಯೂಷ್ ಗೋಯಲ್
- 2018ರ ಡಿಸೆಂಬರ್ ವೇಳೆಗೆ ಶೇ.2.1ರಷ್ಟು ಹಣದುಬ್ಬರ ಇತ್ತು. 2018-19ನೇ ಸಾಲಿನಲ್ಲಿ ಹಣಕಾಸಿನ ಕೊರತೆಯನ್ನು 3.4ಕ್ಕೆ ಇಳಿಕೆ ಮಾಡಲಾಗಿದೆ – ಪಿಯೂಷ್ ಗೋಯಲ್
ಬೆಳಗ್ಗೆ 11 ಗಂಟೆ : ಹಂಗಾಮಿ ಹಣಕಾಸು ಸಚಿವ ಪಿಯೂಷ್ ಗೋಯಲ್ ಬಜೆಟ್ ಮಂಡನೆ ಆರಂಭ.