Thursday, January 2, 2025

ರಾಜೀನಾಮೆ ನೀಡಲು ಸಿದ್ಧರಿದ್ದಾರಂತೆ ಸಿಎಂ ಕುಮಾರಸ್ವಾಮಿ!

ಬೆಂಗಳೂರು : ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿ ತಾನು ರಾಜೀನಾಮೆ ನೀಡಲು ಸಿದ್ಧನಿದ್ದೇನೆ ಅಂತ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜೀನಾಮೆ ನೀಡುವ ವಿಚಾರವನ್ನು ಪ್ರಸ್ತಾಪಿಸಿದ್ರು. ಕಾಂಗ್ರೆಸ್​ ಶಾಸಕರ ಹೇಳಿಕೆಗಳಿಂದ ತಾಳ್ಮೆ ಕಳೆದುಕೊಂಡಿರುವ ಸಿಎಂ ಕಾಂಗ್ರೆಸ್ ವಿರುದ್ಧ ಬಹಿರಂಗವಾಗಿ ಕೆಂಡಕಾರಿದ್ದಾರೆ. ”ಕಾಂಗ್ರೆಸ್​ ನಾಯಕರು ಮೈತ್ರಿ ಧರ್ಮ ಮೀರಿ ಮಾತನಾಡುತ್ತಿದ್ದಾರೆ. ಕಾಂಗ್ರೆಸ್​ ಶಾಸಕರ ಹೇಳಿಕೆಗಳಿಗೆ ನಾಯಕರು ಕಡಿವಾಣ ಹಾಕಲಿ. ಇದು ಯಾವುದೂ ನನಗೆ ಯಾವುದೇ ರೀತಿಯ ಪರಿಣಾಮ ಬೀರಲ್ಲ. ಶಾಸಕರ ವರ್ತನೆ ಇದೇ ರೀತಿ ಮುಂದುವರೆದ್ರೆ ನಾನು ಕೆಳಗಿಳಿಯುತ್ತೇನೆ. ಇಂಥಾ ಹೇಳಿಕೆಗಳಿಂದ ಕಾಂಗ್ರೆಸ್​​ ಪಕ್ಷಕ್ಕೇ ನಷ್ಟ” ಎಂದಿದ್ದಾರೆ ಸಿಎಂ.
ಸಿದ್ದರಾಮಯ್ಯನವರೇ ತಮ್ಮ ಸಿಎಂ ಅಂತ ಶಾಸಕ ಎಸ್​.ಟಿ ಸೋಮಶೇಖರ್ ಹೇಳಿದ್ದರು. ಸಚಿವ ಎಂಟಿಬಿ ನಾಗರಾಜ್​ ಅವರೂ ಕೂಡ ಸಿದ್ದರಾಮಯ್ಯ ಅವರ ಪರ ನೇರ ಬ್ಯಾಟಿಂಗ್​ ಮಾಡಿದ್ದರು. ಶಾಸಕ ಸುಧಾಕರ್ ಅವರು ಸಿಎಂ ವಿರುದ್ಧ ಕಿಡಿಕಾರಿದ್ದರು. ಈ ಎಲ್ಲಾ ಹೇಳಿಕೆಗಳಿಗೆ ಬೇಸತ್ತು ರಾಜೀನಾಮೆ ಬಗ್ಗೆ ಸಿಎಂ ಮಾತಾಡಿದ್ದಾರೆ.

RELATED ARTICLES

Related Articles

TRENDING ARTICLES