ಬೆಂಗಳೂರು : ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರ ಪರ ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಬ್ಯಾಟಿಂಗ್ ನಡೆಸಿದ್ದಾರೆ.
ಕಾಂಗ್ರೆಸ್ ನಾಯಕರ ಹೇಳಿಕೆಗಳಿಂದ ಬೇಸತ್ತು ರಾಜೀನಾಮೆ ನೀಡಲು ಸಿದ್ಧ ಎಂದು ಕುಮಾರಸ್ವಾಮಿ ಅವರು ಹೇಳಿಕೆ ನೀಡಿದ ಬೆನ್ನಲ್ಲೇ ಪರಮೇಶ್ವರ್, ”ಕುಮಾರಸ್ವಾಮಿಯವರೇ ನಮ್ಮ ಮುಖ್ಯಮಂತ್ರಿ. ಸಿದ್ದರಾಮಯ್ಯನವರು ನಮ್ಮ ಸಿಎಲ್ಪಿ ನಾಯಕರು. ಎಸ್.ಟಿ ಸೋಮಶೇಖರ್ ಅವರ ಹೇಳಿಕೆ ವೈಯಕ್ತಿಕ” ಎಂದಿದ್ದಾರೆ.
ಇನ್ನು ಡ್ಯಾಮೇಜ್ ಕಂಟ್ರೋಲ್ಗೆ ಮುಂದಾಗಿರುವ ಕಾಂಗ್ರೆಸ್ ಸಿಎಂ ರಾಜೀನಾಮೆ ಹೇಳಿಕೆ ಬೆನ್ನಲ್ಲಿ ‘ನಮ್ಮ ಸಿಎಂ ಸಿದ್ದರಾಮಯ್ಯನವರೇ ಎಂದಿರುವ’ ಎಸ್.ಟಿ ಸೋಮಶೇಖರ್ ಕೆಪಿಸಿಸಿ ಶೋಕಾಸ್ ನೋಟಿಸ್ ನೀಡಲು ಮುಂದಾಗಿದೆ.