Wednesday, January 22, 2025

ಪ್ರಿಯಾಂಕಾ ವಾದ್ರಾ ಮಾನಸಿಕ ಅಸ್ವಸ್ಥೆ : ಸುಬ್ರಮಣಿಯನ್ ಸ್ವಾಮಿ

ನವದೆಹಲಿ : ಉತ್ತರ ಪ್ರದೇಶದ ಪೂರ್ವವಲಯ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಅವರನ್ನು ರಾಜ್ಯಸಭಾ ಸದಸ್ಯ, ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಮಾನಸಿಕ ಅಸ್ವಸ್ಥೆ ಅಂತ ಕರೆದಿದ್ದಾರೆ.
ಎಎನ್​ಐಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಸುಬ್ರಮಣಿಯನ್ ಸ್ವಾಮಿ, ”ಉತ್ತರ ಪ್ರದೇಶದ ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಇತ್ತೀಚೆಗಷ್ಟೇ ನೇಮಕವಾಗಿರುವ ಪ್ರಿಯಾಂಕಾ ವಾದ್ರಾ ಅವರಿಗೆ ಬೈಪೋಲಾರ್ ಮಾನಸಿಕ ಸಮಸ್ಯೆ ಇದೆ. ಅವರು ಜನರನ್ನು ಮನಬಂದಂತೆ ಥಳಿಸಬಹುದು. ಆ ಕಾಯಿಲೆಯಿಂದ ಅವರು ಸಾರ್ವಜನಿಕ ಜೀವನವನ್ನು ಸಮರ್ಥವಾಗಿ ನಿಭಾಯಿಸಲಾಗುವುದಿಲ್ಲ. ಅವರು ಮಾನಸಿಕ ಸ್ಥಿಮಿತತೆ ಅಥವಾ ಸಮತೋಲನವನ್ನು ಕಳೆದುಕೊಳ್ಳಬಹುದು ಎನ್ನುವುದನ್ನು ಜನ ಅರಿತುಕೊಳ್ಳಬೇಕು” ಎಂದು ಸುಬ್ರಮಣಿಯನ್ ಸ್ವಾಮಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

RELATED ARTICLES

Related Articles

TRENDING ARTICLES