Friday, April 19, 2024

ರೌಡಿ ಎಂಎಲ್​ಎ ಗಣೇಶ್ ಬೆನ್ನಿಗಿದ್ದಾರಾ ಪೊಲೀಸರು?

ಬೆಂಗಳೂರು : ರಾಮನಗರ ಬಳಿಯ ಈಗಲ್​ಟನ್ ರೆಸಾರ್ಟ್​​ನಲ್ಲಿ ವಿಜಯನಗರ ಶಾಸಕ ಆನಂದ್​ ಸಿಂಗ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರೋ ಕಂಪ್ಲಿಯ ರೌಡಿ ಶಾಸಕ ಜೆ.ಎನ್ ಗಣೇಶ್ ಇನ್ನೂ ಅರೆಸ್ಟ್ ಆಗಿಲ್ಲ!
ಗಣೇಶ್ ವಿರುದ್ಧ ಕೇಸ್​ ದಾಖಲಾಗಿ 5ಗಳಾದ್ರೂ ರಾಮನಗರ ಎಸ್​ ಪಿ ರಮೇಶ್ ನೇತೃತ್ವದ ಟೀಮ್ ಇನ್ನೂ ಅವರ ಹುಡುಕಾಟ ನಡೆಸುತ್ತಲೇ ಇದೆ.
ಗಣೇಶ್​ ಬಗ್ಗೆ ಮಾಹಿತಿ ಕಲೆ ಹಾಕಿದ್ದರೂ ಕೂಡ ಗಣೇಶ್ ಇನ್ನೂ ಅರೆಸ್ಟ್ ಆಗಿಲ್ಲ. ಇದರಿಂದಾಗಿ ಗಣೇಶ್ ಬೆನ್ನಿಗೆ ಪೊಲೀಸರೇ ನಿಂತಿದ್ದಾರಾ ಎನ್ನುವ ಪ್ರಶ್ನೆ ಮೂಡುತ್ತಿದೆ. ಇನ್ನು ರೌಡಿ ಪಟ್ಟ ಅಲಂಕರಿಸಿರುವ ಎಂಎಲ್​ಎ ಗಣೇಶ್ ಕಾಂಗ್ರೆಸ್​​ನವರಾಗಿದ್ದು, ಅವರನ್ನು ಬಚಾವ್ ಮಾಡುವಂತೆ ಪೊಲಿಸರಿಗೇನಾದ್ರು ಸರ್ಕಾರದಿಂದ ಒತ್ತಡ ಇದೆಯಾ ಎಂಬ ಅನುಮಾನ ಕೂಡ ಮೂಡುತ್ತಿದೆ.
ಕಂಪ್ಲಿ ಎಂಎಎಲ್​ಯಿಂದ ಹಲ್ಲೆಗೊಳಗಾದವರು ಬೇರೆ ಯಾರೂ ಅಲ್ಲ… ಅವರೂ ಶಾಸಕರೇ! ಶಾಸಕರ ಪರಿಸ್ಥಿತಿಯೇ ಹೀಗಾದ್ರೆ ಸಾಮಾನ್ಯರ ಪಾಡೇನು?

RELATED ARTICLES

Related Articles

TRENDING ARTICLES