Thursday, January 23, 2025

31ನೇ ವಸಂತಕ್ಕೆ ಕಾಲಿಟ್ಟ ಜೂ.ವಾಲ್

ಟೀಮ್ ಇಂಡಿಯಾದ ಟೆಸ್ಟ್ ಸ್ಪೆಷಲಿಸ್ಟ್, ಜ್ಯೂನಿಯರ್ ವಾಲ್ ಸೌರಾಷ್ಟ್ರ ಬ್ಯಾಟ್ಸ್​ಮನ್​ಗಿಂದು ಹುಟ್ಟು ಹಬ್ಬದ ಸಂಭ್ರಮ. ಟೀಮ್ ಇಂಡಿಯಾದ ಪ್ರಸ್ತುತ ಟೆಸ್ಟ್ ತಂಡವನ್ನು ಪುಜಾರ ಹೊರತುಪಡಿಸಿ ಉಹಿಸಿಕೊಳ್ಳೋದು ನಿಜಕ್ಕೂ ಕಷ್ಟ. ಇಂದು 31ನೇ ವಸಂತಕ್ಕೆ ಕಾಲಿಟ್ಟಿರುವ ಪೂಜಾರ ಹುಟ್ಟಿದ್ದು 1988ರಲ್ಲಿ. ತಮ್ಮ 14ನೇ ವಯಸ್ಸಿನಲ್ಲಿಯೇ ತ್ರಿಶತಕ ಬಾರಿಸಿದ ಸಾಧನೆ ಮಾಡಿದ ಪೂಜಾರ ಇಂದು ಟೀಮ್ ಇಂಡಿಯಾದ ಬ್ಯಾಟಿಂಗ್ ಪಿಲ್ಲರ್. ಒಂದು ತುದಿಯ ಬ್ಯಾಟ್ಸ್​​​ಮನ್​​ಗಳು ಪೆವಿಲಿಯನ್ ಪರೇಡ್ ನಡೆಸ್ತಾ ಇದ್ರೆ, ಇನ್ನೊಂದು ತುದಿಯಲ್ಲಿ ನಿಂತು ರಕ್ಷಣಾತ್ಮಕ ಬ್ಯಾಟಿಂಗ್ ನಡೆಸುವ ಪೂಜಾರ ಬೌಲರ್​ಗಳ ತಾಳ್ಮೆ ಪರೀಕ್ಷಿಸುತ್ತಾರೆ.

2010ರಲ್ಲಿ ಆಸ್ಟ್ರೇಲಿಯಾ ವಿರುದ್ಧದ 2ನೇ ಟೆಸ್ಟ್ ಮೂಲಕ ಪದಾರ್ಪಣೆ ಮಾಡಿದ ಪೂಜಾರ ದ್ವಿತೀಯ ಇನ್ನಿಂಗಸ್​ನಲ್ಲಿ ಅರ್ಧಶತಕ ಸಿಡಿಸಿ ಮಿಂಚಿದ್ರು. ರಾಷ್ಟ್ರಿಯ ತಂಡಕ್ಕೆ ಆಯ್ಕೆಯಾದ ಕೆಲವೇ ದಿನಗಳಲ್ಲಿ ಟೀಮ್ ಇಂಡಿಯಾದ ಖಾಯಂ ಸದಸ್ಯರಾದ್ರು. ಪ್ರತಿ ಕ್ರಿಕೆಟಿಗನ ಜೀವನದಲ್ಲಿ ಏರು-ಪೇರುಗಳಿದ್ದಂತೆ ಪೂಜಾರ ಕೂಟ ಕ್ರಿಕೆಟ್ ಜೀವನದ ಹಲವು ಏಳು-ಬೀಳುಗಳನ್ನ ಕಂಡಿದ್ದಾರೆ. ಟೆಸ್ಟ್ ಕ್ರಿಕೆಟ್​​ನ ಖಾಯಂ ಸದಸ್ಯತ್ವ ಚೇತೇಶ್ವರ್ ಪುಜಾರಗೆ ಫಿಕ್ಸ್ ಆದ್ರೂ, ಸೀಮಿತ ಫಾರ್ಮ್ಯಾಟ್​​​ನಲ್ಲಿ ಪೂಜಾರ ಲಯ ಕಂಡುಕೊಳ್ಳಲಿಲ್ಲ. ಆದರೆ ಈ ಬಗ್ಗೆ ತಲೆ ಕೆಡಿಕೊಳ್ಳದ ಪೂಜಾರ ಟೀಮ್ಇಂಡಿಯಾ ಪರ ಸಿಕ್ಕ ಅವಕಾಶಗಳಲ್ಲೇ ಮಿಂಚಿ ಟೆಸ್ಟ್ ಸ್ಪೆಷಲಿಸ್ಟ್ ಎಂಬ ಖ್ಯಾತಿಗೆ ಪಾತ್ರರಾದ್ರು. ಇದಕ್ಕೆ ಇತ್ತಿಚೆಗಷ್ಟೇ ಅಂತ್ಯವಾದ ಆಸ್ಟ್ರೇಲಿಯಾ ಪ್ರವಾಸ ಕೂಡ ಹೊರತಾಗಿಲ್ಲ. ಕಾಂಗರೂ ನಾಡಿನಲ್ಲಿ ಆಡಿದ 5 ಟೆಸ್ಟ್ ಪಂದ್ಯಗಳಲ್ಲಿ 3 ಶತಕ ಸಿಡಿಸಿದ ಪೂಜಾರ, 521 ರನ್ ಗಳಿಸುವ ಮೂಲಕ ಸರಣಿ ಶ್ರೇಷ್ಠ ಪುರಸ್ಕಾರಕ್ಕೆ ಭಾಜನರಾಗಿದ್ರು.

ಒಟ್ಟು 68 ಟೆಸ್ಟ್ ಪಂದ್ಯಗಳನ್ನಾಡಿರುವ ಪೂಜಾರ 18 ಶತಕ ಹಾಗೂ 20 ಅರ್ಧಶತಕದ ನೆರವಿನೊಂದಿಗೆ 5426 ರನ್ ಸಿಡಿಸಿದ್ದಾರೆ. ಇದರಲ್ಲಿ 3 ದ್ವಿಶತಕಗಳೂ ಸೇರಿವೆ. ಸದ್ಯ ಬೆಂಗಳೂರಿನಲ್ಲಿ ನಡೆಯುತ್ತಿರುವ ರಣಜಿ ಸೆಮಿಫೈನಲ್ ಪಂದ್ಯದಲ್ಲಿ ಸೌರಾಷ್ಟ್ರ ಪರವಾಗಿ ಬ್ಯಾಟ್ ಬೀಸುತ್ತಿದ್ದಾರೆ. ವಿಶೇಷ ಅಂದ್ರೆ ಪುಜಾರ ತಮ್ಮ ವೃತ್ತಿ ಜೀವನ ಆರಂಭಸಿದ್ದೂ ಬೆಂಗಳೂರಿನಲ್ಲೇ.

ಇನ್ನು ಜ್ಯೂನಿಯರ್ ವಾಲ್ ಹುಟ್ಟುಹಬ್ಬಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಹಾಪೂರವೇ ಬಂದಿದೆ. ಅವುಗಳಲ್ಲಿ ಆಯ್ದ ಕೆಲವು ಇಲ್ಲಿವೆ.

https://twitter.com/_RahulDravid/status/1088651816064241665

RELATED ARTICLES

Related Articles

TRENDING ARTICLES