Thursday, January 23, 2025

ಸಿದ್ದರಾಮಯ್ಯ ಕಾಂಗ್ರೆಸ್​ಗೆ ಕಂಟಕ: ಜನಾರ್ದನ ಪೂಜಾರಿ

ಮಂಗಳೂರು: ಸಿದ್ದರಾಮಯ್ಯ ಅವರು ಕಾಂಗ್ರೆಸ್​ಗೆ ಬಂದಿರೋದೆ ಪಕ್ಷವನ್ನು ನಿರ್ನಾಮ ಮಾಡೋಕೆ ಅಂತ ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಮಂಗಳೂರಿನಲ್ಲಿ ಇಂದು ಹೇಳಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಹರಿಹಾಯ್ದಿದ್ದಾರೆ. ಸಿದ್ದರಾಮಯ್ಯ ಕಾಂಗ್ರೆಸ್​ಗೆ ಬಂದಿರೋದೆ ಪಕ್ಷ ನಿರ್ನಾಮ ಮಾಡೋದಕ್ಕೆ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಸಮ್ಮಿಶ್ರ ಸರ್ಕಾರ ಉಳಿಯೋಕೆ ಕಾರಣ ಸಿಎಂ ಎಚ್​ ಡಿ ಕುಮಾರಸ್ವಾಮಿ ಅವರು. ಸರ್ಕಾರವನ್ನು ಉಳಿಸುವಲ್ಲಿ ಮಾಜಿ ಪ್ರಧಾನಿ ಎಚ್​ ಡಿ ದೇವೇಗೌಡರ ಪಾತ್ರ ದೊಡ್ಡದು” ಅಂತ ಹೇಳಿದ್ದಾರೆ. ಈ ಮೂಲಕ ಕಾಂಗ್ರೆಸ್​ನಿಂದ ಸರ್ಕಾರ ಉಳಿದಿಲ್ಲ ಅಂತ ಜನಾರ್ದನ ಪೂಜಾರಿ ಟಾಂಗ್​ ಕೊಟ್ಟಿದ್ದಾರೆ.

“ನಾಯಕರು ದಾರಿಯಲ್ಲಿ ಹೊಡೆದಾಡಿಕೊಳ್ಳುವುದೊಂದೇ ಬಾಕಿ. ಇವರಿಗೆ ಜನರೇ ದಾರಿಯಲ್ಲಿ ಹೊಡೆಯುತ್ತಾರೆ” ಅಂತ ಜನಾರ್ದನ ಪೂಜಾರಿ ಹೇಳಿದ್ದಾರೆ. ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗಲೂ ಜನಾರ್ದನ ಪೂಜಾರಿ ಅವರು ಹಲವು ಬಾರಿ ಅವರ ವಿರುದ್ಧ ವಾಗ್ದಾಳಿ ನಡೆಸಿದ್ರು.

RELATED ARTICLES

Related Articles

TRENDING ARTICLES