ಪ್ರಸಕ್ತ ಸಾಲಿನ ರಣಜಿಯಲ್ಲಿ ಕರ್ನಾಟಕ ಸೆಮಿಫೈನಲ್ಗೆ ಲಗ್ಗೆ ಇಟ್ಟಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕ್ವಾರ್ಟರ್ ಫೈನಲ್ನಲ್ಲಿ ರಾಜಸ್ಥಾನವನ್ನು6 ವಿಕೆಟ್ಗಳಿಂದ ಮಣಿಸಿದ ಕರ್ನಾಟಕ ಗೆಲುವಿನ ಕೇಕೆ ಹಾಕಿದೆ.
ಗೆಲ್ಲಲು 184 ರನ್ಗಳ ಗುರಿ ಪಡೆದಿದ್ದ ಮನೀಷ್ ಪಾಂಡೆ ಬಳಗ 3 ವಿಕೆಟ್ ನಷ್ಟಕ್ಕೆ 45 ರನ್ಗಳೊಂದಿಗೆ ದಿನದಾಟ ಆರಂಭಿಸಿತು. ದಿನದಾಟದ ಆರಂಭದಲ್ಲೇ ನೈಟ್ ವಾಚಮನ್ ರೋನಿತ್ ಮೋರೆ (8) ಔಟಾದ್ರು. ಬಳಿಕ ಜೊತೆಯಾದ ಕರುಣ್ ನಾಯರ್ ಹಾಗೂ ನಾಯಕ ಮನೀಷ್ ಪಾಂಡೆ ಜೋಡಿ ಅಮೋಘ ಜೊತೆಯಾಟವಾಡಿತು. ಮನೀಷ್ ಪಾಂಡೆ ಅಜೇಯ 87 ರನ್ ಸಿಡಿಸಿದ್ರೆ, ಕರುಣ್ ನಾಯರ್ ಅಜೇಯ 61 ರನ್ಗಳನ್ನ ಕಲೆಹಾಕಿದ್ರು. ಬರೋಬ್ಬರಿ 129 ರನ್ಗಳ ಜೊತೆಯಾಟವಾಡಿದ ಇವರು 47.5 ಓವರ್ಗಳಲ್ಲಿ ತಂಡವನ್ನು ಗೆಲುವಿನ ದಡ ಸೆರಿಸಿದ್ರು.
ಇನ್ನು ಪಂದ್ಯದಲ್ಲಿ ಬೆಸ್ಟ್ ಫರ್ಪಾಮೆನ್ಸ್ ನೀಡಿದ ವಿನಯ್ ಕುಮಾರ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಈ ಜಯದೊಂದಿಗೆ ಕರ್ನಾಟಕ ಅಂತಿಮ 4ರ ಸುತ್ತಿಗೆ ಪ್ರವೇಶ ಪಡೆದಿದ್ದು, ಇದೇ 24ರಂದು ನಡೆಯುವ ಸೆಮಿಫೈನಲ್ ಪಂದ್ಯದಲ್ಲಿ ಸೌರಾಷ್ಟ್ರ ಅಥವಾ ಉತ್ತರ ಪ್ರದೇಶ ತಂಡವನ್ನು ಎದುರಿಸಲಿದೆ.