ಆನೇಕಲ್ : ತಮ್ಮ ಪಕ್ಷದ ಯಾವ್ದೇ ವಿಕೆಟ್ ಬಿದ್ದಿಲ್ಲ. ಔಟಾದವ್ರು ಎಕ್ಸ್ಟ್ರಾಪ್ಲೇಯರ್ಸ್ ಅಂತ ಶಾಸಕ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಆಪರೇಷನ್ ಕಮಲದ ಬಗ್ಗೆ ಬುಧವಾರ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಪಕ್ಷದ ಯಾವ್ದೇ ವಿಕೆಟ್ ಬಿದ್ದಿಲ್ಲ. ಔಟಾದವ್ರು ಎಕ್ಸ್ಟ್ರಾಪ್ಲೇಯರ್ಸ್ ಅಂತ ಬೆಂಬಲ ಹಿಂಪಡೆದ ಪಕ್ಷೇತರ ಶಾಸಕರಾದ ಆರ್. ಶಂಕರ್ ಮತ್ತು ಎಚ್. ನಾಗೇಶ್ ಅವರಿಗೆ ಟಾಂಗ್ ಕೊಟ್ರು.
ಪಕ್ಷದ ಕೆಲವು ಅತೃಪ್ತರು ಮುಂಬೈನಲ್ಲಿ ಇದ್ದಾರೆ. ಇದರಿಂದ ಸರ್ಕಾರಕ್ಕೆ ಏನು ಆಗಲ್ಲ. ಬಿಜೆಪಿಯವರು ಆಪರೇಷನ್ ಕಮಲ ಮಾಡುತ್ತೇನೆ ಎಂದು ಹೇಳಿತ್ತಿದ್ದಾರೆ ಇದು ಇವತ್ತಿನ ವಿಚಾರ ಅಲ್ಲ. ದೋಸ್ತಿ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ