ರಾಜ್ಯ ರಾಜಕೀಯದಲ್ಲಿ ‘ಸಂ’ಕ್ರಾಂತಿ ನಡೆದೇ ಬಿಟ್ಟಿದ್ದು, ಮೊದಲ ಹಂತದ ಆಪರೇಷನ್ ಸಕ್ಸಸ್ ಆಗಿದೆ! ಮೈತ್ರಿಗೆ ಬೆಂಬಲ ನೀಡಿದ್ದ ಇಬ್ಬರು ಪಕ್ಷೇತರ ಶಾಸಕರು ತಾವು ನೀಡಿದ್ದ ಬೆಂಬಲವನ್ನು ವಾಪಸ್ಸು ಪಡೆದಿದ್ದಾರೆ.
ರಾಣೆಬೆನ್ನೂರು ಶಾಸಕ ಆರ್.ಶಂಕರ್ ಮತ್ತು ಮುಳಬಾಗಿಲು ಶಾಸಕ ಎಚ್.ನಾಗೇಶ್ ದೋಸ್ತಿಗಳಿಗೆ ‘ಕೈ’ ಕೊಟ್ಟು ಬಿಜೆಪಿಗೆ ಬೆಂಬಲ ಘೋಷಿಸಿದ್ದಾರೆ. ಈ ಮೂಲಕ ಸಂಕ್ರಾಂತಿ ದಿನ ಮೈತ್ರಿಯ ಎರಡು ವಿಕೆಟ್ ಪತನವಾದಂತಾಗಿದ್ದು, ಎಚ್.ಡಿ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಪಾಳಯದ ಆತಂಕ ಹೆಚ್ಚಿದೆ.