Saturday, September 14, 2024

ಪಕ್ಷ ಬಿಡ್ತೀನಂತ ತಮಾಷೆಗಂದ್ರಂತೆ  ಶಾಸಕ ಗಣೇಶ್​ ಹುಕ್ಕೇರಿ..!

ಕಾಂಗ್ರೆಸ್​ ಪಕ್ಷ ಬಿಟ್ಟು ಬಿಜೆಪಿ ಸೇರುತ್ತೇನೆ ಅಂತ ತಮಾಷೆಗಾಗಿ ಹೇಳಿದೆ ಅಂತ ಚಿಂಚೋಳಿ ಕಾಂಗ್ರೆಸ್​ ಶಾಸಕ ಗಣೇಶ್ ಹುಕ್ಕೇರಿ ಹೇಳಿದ್ದಾರೆ.

“ನಾನು ಹುಟ್ಟಿದಾಗಿನಿಂದಲೂ ಕಾಂಗ್ರೆಸ್ ನನ್ನ ಮನೆ. ನಾನ್ಯಾಕೆ ಕಾಂಗ್ರೆಸ್ ಪಕ್ಷ ತೊರೆಯಲಿ”  ಅಂತ ಶಾಸಕ ಗಣೇಶ್ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ್ದಾರೆ.

“ತಮಾಷೆಗಾಗಿ ಬಿಜೆಪಿ ಸೇರಲಿದ್ದೇನೆ ಅಂತ ಹೇಳಿಕೆ ನೀಡಿದ್ದೇನೆ. ಕಾಂಗ್ರೆಸ್​ನಿಂದ ಅಧಿಕಾರ, ಅಭಿವೃದ್ಧಿ ಸಾಧ್ಯವಾಗಿದೆ. ಲೋಕಸಭಾ ಚುನಾವಣೆಗೆ ಕಾಂಗ್ರೆಸ್​ನಿಂದ ಪ್ರಚಾರ ಮಾಡುತ್ತೇನೆ. ಕಾಂಗ್ರೆಸ್​ ಎಂದರೆ ನಮ್ಮ ತಾಯಿ ಇದ್ದ ಹಾಗೆ. ಕಾಂಗ್ರೆಸ್​ ಪಕ್ಷ ಬಿಡುವ ಮಾತೇ ಇಲ್ಲ” ಅಂತ ಶಾಸಕ ಗಣೇಶ್​ ಹುಕ್ಕೇರಿ ಚಿಕ್ಕೋಡಿಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಕಾಂಗ್ರೆಸ್​ ಪಕ್ಷ ತೊರೆದು ಬಿಜೆಪಿ ಸೇರುತ್ತೇನೆ ಎಂಬ ಗಣೇಶ್ ಹುಕ್ಕೇರಿ ಹೇಳಿಕೆ ಬಗ್ಗೆ ಬೆಳಗಾವಿಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ. “ಗಣೇಶ್ ಹುಕ್ಕೇರಿ ಪಕ್ಷ ಬಿಡುವುದು ಸುದ್ದಿ ಸುಳ್ಳು. ಯಾರೂ ಕಾಂಗ್ರೆಸ್​ ಪಕ್ಷ ಬಿಟ್ಟು ಹೋಗಲ್ಲ. ಯಾವುದೋ ಸಮಯದಲ್ಲಿ ಆ ರೀತಿ ಹೇಳಿರುತ್ತಾರೆ. ಆ ಹೇಳಿಕೆಯನ್ನೇ ನಿಜ ಎನ್ನುವುದಕ್ಕೆ ಆಗೋದಿಲ್ಲ” ಅಂತ ಹೇಳಿದ್ದಾರೆ.

RELATED ARTICLES

Related Articles

TRENDING ARTICLES