Monday, December 23, 2024

ಅತೃಪ್ತ ‘ಕೈ’ ಶಾಸಕರು ಬಿಜೆಪಿ ಸೇರುವ ಬಗ್ಗೆ ಬಿಎಸ್​​ವೈ ಏನಂತಾರೆ?

ಕಾಂಗ್ರೆಸ್​ನ ಅತೃಪ್ತ ಶಾಸಕರು ಬಿಜಿಪಿಗೆ ಸೇರುವ ಕುರಿತು ಬಿ.ಎಸ್​ ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ. ಕೈ ಶಾಸಕರು ಬಿಜೆಪಿ ಸೇರೋ ಕುರಿತು ಏನೂ ತಿಳಿದಿಲ್ಲ ಅನ್ನುವ ರೀತಿ ಮಾತನಾಡಿರುವ ಬಿಎಸ್​ ಯಡಿಯೂರಪ್ಪ “ಕಾಂಗ್ರೆಸ್​​ನ ಯಾವ ಅತೃಪ್ತ ಶಾಸಕ ಜೊತೆಗೂ ನನಗೆ ಸಂಪರ್ಕ ಇಲ್ಲ. ಯಾರು ದೆಹಲಿಗೆ ಬಂದಿದ್ದಾರೆ ಅಂತ ಗೊತ್ತಿಲ್ಲ. ಇಂದು, ನಾಳೆ ಮೀಟಿಂಗ್​ ನಡೆಯುತ್ತೆ. ಮೀಟಿಂಗ್ ಇವತ್ತೇ ಮುಗಿದರೆ ವಾಪಸ್ ಹೋಗ್ತೀವಿ. ಲೋಕಸಭಾ ಚುನಾವಣೆ ಸಿದ್ಧತಾ ಸಭೆ ನಡೆಯುತ್ತಿದ್ದು, ನಮ್ಮ ಶಾಸಕರಿಗೆ ಏನ್​ ಹೇಳ್ಬೇಕೋ ಅದನ್ನು ಹೇಳ್ತೀವಿ” ಅಂತ ಹೇಳಿದ್ದಾರೆ.

RELATED ARTICLES

Related Articles

TRENDING ARTICLES